ಗುರುಮಠಕಲ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಗೆ ಬಿಜೆಪಿ (BJP) ಟಿಕೆಟ್ ನೀಡಿದೆ. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಅನಪೂರಗೆ (Lalita Anpur) ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ (Congress) ಸೇರಿದ್ದ ಅಭ್ಯರ್ಥಿ ಬಾಬುರಾವ್ ಚಿಂಚನಸೂರಗೆ ಬಿಜೆಪಿ ಚೆಕ್‍ಮೇಟ್ ನೀಡಿದೆ.
ಇದುವರೆಗೂ ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಯಾವುದೇ ಪಕ್ಷ ಮಣೆ ಹಾಕಿರಲಿಲ್ಲ. ಆದರೆ, ಈ ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ. ಹಿಂದುಳಿದ ಕೋಲಿ ಕಬ್ಬಲಿಗ ಸಮುದಾಯದ ಪ್ರಭಾವಿ ಮಹಿಳೆಯಾಗಿರುವ ಲಲಿತಾ ಅನಪೂರ ಯಾದಗಿರಿ (Yadgiri) ನಗರಸಭೆಯ ಹಾಲಿ ಸದಸ್ಯರಾಗಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಸಮುದಾಯದ ಹೆಚ್ಚಿನ ಮತಗಳು ಇರುವುದರಿಂದ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಉತ್ತಮ ಪೈಪೋಟಿ ನೀಡಲಿದ್ದಾರೆ ಎನ್ನುವ ರಾಜಕೀಯ ಲೆಕ್ಕಾಚಾರ ಇದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ (Gurumatkal) ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಬಾಬುರಾವ್ ಚಿಂಚನಸೂರ ಹಾಗೂ ಜೆಡಿಎಸ್‍ನಿಂದ (JDS) ಶರಣಗೌಡ ಕಂದಕೂರಗೆ ಲಲಿತಾ ಟಾಂಗ್ ಕೊಡುತ್ತಾರಾ ನೋಡಬೇಕಿದೆ.








