ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಖೈದಿಗೆ ಗಲ್ಲು ಶಿಕ್ಷೆ..!
ಶಬನಮ್ ಎಂಬ ಮಹಿಳಾ ಖೈದಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಡೆತ್ ನೋಟ್ ಜಾರಿಯಾಗುವುದು ಬಾಕಿಯಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದ್ರೆ ಸ್ವಾತಂತ್ರ್ಯ ಬಾರತದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಖೈದಿಯನ್ನ ಗಲ್ಲಿಗೇರಿಸಲಾಗುತ್ತಿದೆ.
ಹೌದು 2008ರಲ್ಲಿ ಶಬನಮ್ ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಈಕೆ ಮದುವೆಗೂ ಮುಂಚೆಯೇ ಬೇರೊಬ್ಬನನ್ನ ಪ್ರೀತಿಸುತ್ತಿದ್ದಳು.
15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
ಆದ್ರೆ ಮನೆಯವರು ಬಲವಂತವಾಗಿ ಈಕೆಯನ್ನ ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಮದುವೆಯಾದ ಮೇಲೂ ಆತನನ್ನ ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಳು. ಬಳಿಕ ನ್ಯಾಯಾಲಯವು ಆಕೆಗೆ ಗಲ್ಲು ಶಿಕ್ಷೆಯನ್ನ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು.
ಆದರೆ, ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಕೆಯ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಬಳಿಕ ಕೊನೆಯದಾಗಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಳು. ಆದ್ರೆ ಆಕೆಯ ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಹೀಗಾಗಿ, ಆಕೆಯನ್ನು ನೇಣಿಗೇರಿಸಲು ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ನಡೆದಿವೆ.
ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿದ್ದ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಅವರೇ ಶಬನಮ್ ಳನ್ನೂ ನೇಣಿಗೇರಿಸಲಿದ್ದಾರೆ. ಆದರೆ, ಆಕೆಯನ್ನು ನೇಣಿಗೇರಿಸುವ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಈ ಮೂಲಕ ಸ್ವಾತಂತ್ರ್ಯಾನಂತರ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಲಿರುವ ಮೊದಲ ಮಹಿಳಾ ಖೈದಿ ಶಬನಮ್ ಆಗಿದ್ದಾಳೆ.
ಅಂದಹಾಗೆ, ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈಗಾಗಲೇ ಶಬನಮ್ ನೇಣಿಗೇರಿಸಲು ಸಿದ್ಧತೆಗಳು ನಡೆಯುತ್ತಿದ್ದು, ನೇಣುಗಂಬದ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿದೆ. ಆಕೆಗೆ ಡೆತ್ ವಾರೆಂಟ್ ಜಾರಿಯಾದ ಕೂಡಲೆ ನೇಣಿಗೇರಿಸಲಾಗುವುದು.








