ಇದು ಹೊಸ ರೀತಿಯ ಕೆಫೆ… ಇಲ್ಲಿಯವರೆಗೆ ಯಾರೂ ನೋಡದಿರುವಂತಹದ್ದು
ಗ್ರಾಹಕರನ್ನು ಮೆಚ್ಚಿಸಲು ರೆಸ್ಟೋರೆಂಟ್ಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತದೆ.
ಜೊತೆಗೆ, ಗ್ರಾಹಕರಿಗೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಾರೆ ರೆಸ್ಟೋರೆಂಟ್ ಮಾಲೀಕರು.
ಅದರಂತೆ ರೆಸ್ಟೊರೆಂಟ್ ಒಂದು ಅಕ್ವೇರಿಯಂ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಹೌದು..! ರೆಸ್ಟೋರೆಂಟ್ ಒಂದು ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ರೆಸ್ಟೊರೆಂಟ್ ನಲ್ಲಿ ಮೊಣಕಾಲು ಆಳದ ನೀರನ್ನು ತುಂಬಿಸಿ ಅದರಲ್ಲಿ ವಿವಿಧ ಬಗೆಯ ಮೀನುಗಳನ್ನು ಬಿಟ್ಟಿದೆ.
ಅದರ ಮಧ್ಯೆ ಟೇಬರ್ ಗಳನ್ನು ಹಾಕಿ ಗ್ರಾಹಕರನ್ನು ಆಹ್ವಾನಿಸುತ್ತಿದೆ.
ಅಲ್ಲಿ ನೀರಿನಲ್ಲಿ ಬಗೆಬಗೆಯ ಬಣ್ಣಬಣ್ಣದ ಮೀನುಗಳನ್ನು ನೋಡುತ್ತಾ ಬಡಿಸಿದ ಆಹಾರವನ್ನು ಸೇವಿಸುವಂತೆ ರೆಸ್ಟೋರೆಂಟ್ ಪ್ಲಾನ್ ಮಾಡಿದೆ.
ಅಲ್ಲದೆ ಆ ರೆಸ್ಟೋರೆಂಟ್ ಗೋಡೆಯ ಮೇಲೆ “ಸ್ವೀಟ್ ಫಿಶ್ ಕೆಫೆ” ಎಂಬ ಫಲಕವೂ ಇದೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.