ನಲ್ಗೊಂಡ : ನೆರೆಯ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಹೈದರಾಬಾದ್-ನಾಗಾರ್ಜುನಸಾಗರ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಮೃತಪಟ್ಟಿದ್ದಾರೆ.
ಚಿಂತಪಲ್ಲಿ ಮಂಡಲದ ಧೈರ್ಯಪುರಿ ತಾಂಡಾ ಬಳಿ ಈ ಘಟನೆ ನಡೆದಿದೆ. ಮೃತರ ಪೈಕಿ ಮೂವರನ್ನು ಭರತ್, ನಾಗೇಂದ್ರ, ಗಣೇಶ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
ನಿದ್ರೆಯ ಮಂಪರಿನಲ್ಲಿ ಹಾಗೂ ವೇಗವಾಗಿ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.








