ಬೆಂಗಳೂರು : ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಆಯಿತು. ಬಸ್, ರೈಲು, ವಿಮಾನ, ಸೇರಿದಂತೆ ಎಲ್ಲಾ ರೀತಿಯ ಸಂಚಾರ ರದ್ದು ಮಾಡಲಾಗಿತ್ತು. ಈ ಹೊತ್ತಿನಲ್ಲಿ ಅನೇಕ ಜನರ ಕಣ್ಣೀರಿನ ಕಥೆಗಳು ದಾಖಲಾಗಿವೆ. ಲಾಕ್ ಡೌನ್ ಸಡಿಲಗೊಂಡು ವಿಮಾನಯಾನ ಶುರುವಾದ ಮೊದಲ ದಿನವೇ ಮನಕಲಕುವ ಘಟನೆ ನಡೆದಿದೆ.
ದೇಶವು ಲಾಕ್ ಡೌನ್ ಆಗಿದ್ದ ಕಾರಣಕ್ಕಾಗಿ ಬೆಂಗಳೂರಿನ ಪುಟ್ಟ ಬಾಲಕ ಐದು ವರ್ಷದ ವಿಹಾನ್ ದೆಹಲಿಯಲ್ಲಿ ಸಿಲುಕಿಕೊಂಡಿದ್ದನ್ನು. ವಿಮಾನಯಾನ ಶುರುವಾದ ಈ ದಿನ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಯವರೆಗೂ ಏಕಾಂಗಿಯಾಗಿ ಪ್ರಯಾಣ ಮಾಡಿ ಪಾಲಕರನ್ನು ಸೇರಿಕೊಂಡಿದ್ದಾನೆ. ದೆಹಲಿಯ ಅಜ್ಜಿ ಮನೆಯಲ್ಲಿ ವಿಹಾನ್ ಇದ್ದನ್ನು ಇದೆ ಹೊತ್ತಿಗೆ ಕೊರೊನಾಸುರನ ಕಾಟ ಹೆಚ್ಚಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು.
ಲಾಕ್ ಡೌನ್ ನಿಂದಾಗಿ ವಿಹಾನ್ ತನ್ನ ತಂದೆ ತಾಯಿಯನ್ನು ನೋಡುವ ತವಕದಲ್ಲಿದ್ದರು. ಅಜ್ಜ – ಅಜ್ಜಿಗೆ ವಯಸ್ಸು ಆಗಿದೆ. ಹಾಗಾಗಿ ಅವರು ಪ್ರಯಾಣ ಮಾಡುವಂತಿಲ್ಲ. ಜೊತೆಗೆ ಒಮ್ಮೆ ಬಂದರೆ ವಾಪಸ್ ಹೋಗಲು ಕಷ್ಟವಾಗುತ್ತದೆ. ಆದರೆ ವಿಹಾನ್ ಮಾತ್ರ ಪೋಷಕರನ್ನು ನೋಡದೆ ನರಳುತ್ತಿದ್ದ. ವಿಹಾನ್ ದೈರ್ಯವಂತ ಹುಡುಗ ಎಂದು ಅಜ್ಜಿ –ಅಜ್ಜನಿಗೆ ತಿಳಿದಿತ್ತು. ಮತ್ತೊಂದೆಡೆ ವಿಹಾನ್ ಪಾಲಕರು ತಮ್ಮ ಮಗನನ್ನು ಬೆಂಗಳೂರಿಗೆ ವಾಪಸ್ ಕರೆತರುವಂತೆ ವಿಮಾನಯಾನ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಸ್ಪಂದಿಸಿದ್ದು, ಬಾಲಕನನ್ನು ಏಕಾಂಗಿಯಾಗಿ ವಿಮಾನದಲ್ಲಿ ಕಳಿಸುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಅಜ್ಜಿ –ಅಜ್ಜ ದೈರ್ಯ ಮಾಡಿ ವಿಹಾನ್ ನನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಅದರಂತೆ ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಹಾನ್ ಶರ್ಮಾ ತನ್ನ ತಂದೆ ತಾಯಿಯನ್ನು ಸೇರಿಕೊಂಡಿದ್ದಾನೆ.








