ಇವಳೆಂಥಾ ಮಗಳು… ತಂದೆ ಶವದ ಮುಂದೆ ಫೋಟೋಶೂಟ್ ಮಾಡಿಸಿದ ಮಾಡೆಲ್

1 min read

ಇವಳೆಂಥಾ ಮಗಳು… ತಂದೆ ಶವದ ಮುಂದೆ ಫೋಟೋಶೂಟ್ ಮಾಡಿಸಿದ ಮಾಡೆಲ್

ಫ್ಲೋರಿಡಾ : ಯಾವುದೇ ಮಕ್ಕಳಿಗಾಗಲೀ ತಂದೆ ಎಂಥವರೇ ಇದ್ರೂ ಅವರ ಅಗಲಿಕೆಯಿಂದಾಗುವ ನೋವು ಹೇಳತೀರದ್ದು. ಆ ದುಃಖವನ್ನ ಯಾರ ಬಳಿಗೂ ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹದ್ರಲ್ಲಿ  ಇಲ್ಲೊಬ್ಬ ಮಾಡೆಲ್ ತನ್ನ ತಂದೆಯ ಶವದ ಮುಂದೆಯೇ ಸ್ಟೈಲಿಶ್ ಆಗಿ , ಬಿಂದಾಸ ಲುಕ್ ನಲ್ಲಿ , ನಗುತ್ತಾ ಬಗೆ ಬಗೆಯ ರೀತಿಯಲ್ಲಿ  ಫೋಸ್ ಕೊಟ್ಟು ಫೋಟೋ ಶೂಟ್ ಮಾಡಿಸಿ ನಾಚಿಕೆಯಿಲ್ಲದೇ ಸೋಷಿಇಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಇಂತಹಹದೊಂದು ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಈ ಬುದ್ದಿಯಿಲ್ಲದವಳಂತೆ ವರ್ತಿಸಿರೋ ಮಾಡೆಲ್ ಹೆಸರು ಜಯೆ ರಿವೇರಾ.. ಈಕೆಯ ವಯಸ್ಸು 20 ವರ್ಷ.  ಈಕೆ ಫ್ಲೋರಿಡಾದ ಮೈಮಿ ನಗರದ ಸೋಷಿಯಲ್ ಮೀಡಿಯಾ ಸ್ಟಾರ್.  ಈಕೆಗೆ ಟಿಕ್ ಟಾಕ್ ನಲ್ಲಿ ಸುಮಾರು 3 ಲಕ್ಷ ಫಾಲೋವರ್ಸ್ ಇದ್ದಾರೆ. ಇನ್‍ಸ್ಟಾ ದಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾಳೆ.  ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ.

“ಭಜರಂಗಿ”ಗೆ  ಶುಭಾಶಯ ತಿಳಿಸಿದ ಟಾಲಿವುಡ್ “ಆರ್ಯ”..!

ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡು, ಚಿಟ್ಟೆ ದೂರ ಹಾರಿದೆ. ನೀವು ನನ್ನ ಬೆಸ್ಟ್ ಫ್ರೆಂಡ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಚೆನ್ನಾಗಿಯೇ ಬದುಕಿದ್ರಿ ಎಂದು ಬರೆದುಕೊಂಡಿದ್ದಾಳೆ. ಮತ್ತು #DadLess ಎಂದು ಹ್ಯಾಶ್‍ಟ್ಯಾಗ್ ಕೂಡ ನೀಡಿದ್ದಾಳೆ. ಈ ಫೋಟೋಗಳನ್ನ ಶೇರ್ ಮಾಡ್ತಿದ್ದಂತೆ ಈಕೆಯ ವಿರುದ್ಧ ನೆಟ್ಟಿಗರು ಕೆಂಡಕಾರ್ತಿದ್ದಾರೆ. ಕಮೆಂಟ್ ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಾ ಫೋಸ್ಟ್ ಡಿಲೀಟ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd