Bengaluru : ಇನ್ನೂವರೆಗೂ ಪೀಣ್ಯ ಪ್ಲೈಓವರ್ ಕೆಳಗಿನ ಮುಖ್ಯರಸ್ತೆ ಮಾರ್ಗ ಬಂದ್
ಡಿಸೆಂಬರ್ 25 ಕ್ಕೆ ಬಂದ್ ಮಾಡಲಾಗಿದ್ದ ಪೀಣ್ಯ ಪ್ಲೈಓವರ್ ಕೆಳಗಿನ ಮುಖ್ಯರಸ್ತೆ ಮಾರ್ಗ ಬಂದ್ ಆಗಿದೆ.. ತುಮಕೂರು ಮಾರ್ಗವಾಗಿ ಹೋಗುವ ವಾಹನ ಸವಾರರು ಇದ್ರಿಂದ ಪರದಾಡುವಿಂತಾಗಿದೆ..
ಬೆಂಗಳೂರು,ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ ಡಿಸೆಂಬರ್ 25 ಕ್ಕೆ ಬಂದ್ ಮಾಡಿ , ಜನವರಿ 14 ಕ್ಕೆ ದುರಸ್ಥಿ ಕಾರ್ಯಕ್ಕೆ ಗಡುವು ನೀಡಲಾಗಿತ್ತು.
ಕಳೆದ ಡಿ.25ರಂದು 102, 103ರ ಪಿಲ್ಲರ್ ಸ್ಲಾಬ್ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಉಂಟಾಗಿತ್ತು.
ಇದ್ರಿಂದ ಫ್ಲೈಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಿ ದುರಸ್ತಿ ಕಾರ್ಯ ಪ್ರಾರಂಭ ಮಾಡಲಾಗಿದೆ. ದುರಸ್ತಿ ಕಾರ್ಯ ನಿರ್ವಹಿಸಲು NHAI , 1 ವಾರದ ಕಾಲಾವಕಾಶ ಪಡೆದಿತ್ತು.
ಅದಾದ ಬಳಿಕ ಮತ್ತೆ 14ನೇ ತಾರೀಖಿನವರೆಗೂ ಗಡುವು ಪಡೆದಿತ್ತು,,. ಆದ್ರೆ 22 ದಿನ ಕಳೆದ್ರು ವಾಹನ ಸಂಚಾರಕ್ಕೆ ಫ್ಲೈಓವರ್ ಓಪನ್ ಆಗಿಲ್ಲ.
ಪ್ರತಿದಿನ 8ನೇ ಮೈಲಿಯಿಂದ ಗೊರಗುಂಟೆಪಾಳ್ಯದ ವರೆಗೆ ವಾಹನ ದಟ್ಟಣೆ ಇದ್ದು , ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗ್ತಿದೆ.
ವಾಹನಗಳ ಸಂಚಾರಕ್ಕೆ ಇರೋದು ಕೇಲವ ಸರ್ವಿಸ್ ರೋಡ್ ಮಾತ್ರ.. ಆದ್ರೆ ಪ್ಲೈಓವರ್ ದುರಸ್ಥಿ ಕಾರ್ಯ ಮುಗಿದಿದ್ರು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಸಿಕ್ಕಿಲ್ಲ.. ಇಂದಿನಿಂದ ಫ್ಲೈಓವರ್ ಲೋಡ್ ಟೆಸ್ಟಿಂಗ್ ಆರಂಭವಾಗಲಿದೆ. ವಾರಾಂತ್ಯಕ್ಕೆ ವಾಹನಗಳ ಸಂಚಾರಕ್ಕೆ ಅವಕಾಶ ಸಿಗೋ ಸಾಧ್ಯತೆಯಿದೆ.
ಇಷ್ಟು ದಿನ ಮೈನ್ ರೋಡ್, ಸರ್ವಿಸ್ ರೋಡ್ ನಲ್ಲಿ ವಾಹನಗಳು ಸಂಚಾರ ಮಾಡ್ತಿದ್ವು ಸರ್ವಿಸ್ ರೋಡ್ ನಲ್ಲಿ ಮಾತ್ರ ವಾಹನಗಳು ಓಡಾಡೋದಕ್ಕೆ ಅವಕಾಶ ಇದೆ.
ಎಂಟನೇ ಮೈಲಿಯಿಂದ ಟೋಲ್ ಗೇಟ್ ವರೆಗೂ ಮೈನ್ ರೋಡ್ ನ ಎರಡು ಬದಿಯ ರೋಡ್ ಕ್ಲೋಸ್ ಮಾಡಲಾಗಿದೆ..