ADVERTISEMENT
Friday, August 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಬಹಳ ಆರೋಗ್ಯಕರ ಮತ್ತು ಅಷ್ಟೇ ರುಚಿಕರ 3 ಅಡುಗೆ ರೆಸಿಪಿಗಳು..!

Namratha Rao by Namratha Rao
November 29, 2021
in Cooking, Newsbeat, ಅಡುಗೆ
Fasting - food - sawan
Share on FacebookShare on TwitterShare on WhatsappShare on Telegram

ಹಲಸಿನ ಹಣ್ಣಿನ ಮುಳಕ

ಬೇಕಾಗುವ ಪದಾರ್ಥಗಳು

ಚಿಕ್ಕದಾಗಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆ – 2 ಕಪ್
ಅಕ್ಕಿ – 1 ಕಪ್
ತುರಿದ ತೆಂಗಿನಕಾಯಿ – 1/2 ಕಪ್
ಬೆಲ್ಲ – 1/2 ಕಪ್
ಏಲಕ್ಕಿ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಕರಿಯಲು

Related posts

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

August 28, 2026
ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

August 28, 2026
Saakshatv cooking recipe mulka

ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳವರೆಗೆ ನೆನೆಸಿಡಿ. ನಂತರ ನೆನೆಸಿದ ಅಕ್ಕಿಯನ್ನು ಸೋಸಿ ನೀರನ್ನು ತೆಗೆಯಿರಿ.
ಬಳಿಕ ಅಕ್ಕಿ, ಹಲಸಿನ ಹಣ್ಣಿನ ತೊಳೆ, ತುರಿದ ತೆಂಗಿನಕಾಯಿ, ಬೆಲ್ಲ, ಏಲಕ್ಕಿ, ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈ ಹಿಟ್ಟು ಇಡ್ಲಿ ಹಿಟ್ಟಿಗಿಂತಲೂ ಗಟ್ಟಿ ಇರಬೇಕು.

ಇದನ್ನು 20 ನಿಮಿಷಗಳ ಕಾಲ‌ ಹಾಗೆಯೇ ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ‌ಮಾಡಿ. ಚಿಕ್ಕ ಚಿಕ್ಕ ಉಂಡೆಯಂತೆ ಮಾಡಿ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ. ಈಗ ರುಚಿಯಾದ ಹಲಸಿನ ಮುಳಕ ಸವಿಯಲು ಸಿದ್ಧ.

ಕೆಸುವಿನ ಚಟ್ನಿ

ಬೇಕಾಗುವ ‌ಸಾಮಾಗ್ರಿಗಳು

ಕೆಸುವಿನ ಎಲೆ – 1
ಉದ್ದಿನಬೇಳೆ – 1.5 ಚಮಚ
ದನಿಯಾ – 1/2 ಚಮಚ
ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ತೆಂಗಿನಕಾಯಿತುರಿ – 1 ಕಪ್
ಕತ್ತರಿಸಿದ ಮಾವಿನಕಾಯಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ
ತೆಂಗಿನ ಎಣ್ಣೆ – 2 ಚಮಚ
ಉದ್ದಿನಬೇಳೆ – 1 ಚಮಚ
ಸಾಸಿವೆ – 1 ಚಮಚ
ಕಡಲೆಬೇಳೆ – 1/2 ಚಮಚ
ಇಂಗು – ಚಿಟಕಿ
ಕರಿಬೇವು – ಸ್ವಲ್ಪ
ಮುರಿದ ಕೆಂಪು ಮೆಣಸು – 2
kesu chutney
ಮಾಡುವ ವಿಧಾನ

ಕೆಸುವಿನ ಎಲೆಯನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ. ನಂತರ ನೀರು ಸೇರಿಸಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ‌ಮಾಡಿ.‌ ನಂತರ
ಉದ್ದಿನಬೇಳೆ, ದನಿಯಾ, ಮೆಣಸಿನಕಾಯಿ, ಕರಿಬೇವು ಹಾಕಿ ಹುರಿದುಕೊಳ್ಳಿ.
ತಣ್ಣಗಾದ ನಂತರ ಅದಕ್ಕೆ ಬೇಯಿಸಿ ಇಟ್ಟುಕೊಂಡ ಕೆಸುವಿನ ಎಲೆ ಸೇರಿಸಿ. ನಂತರ ತೆಂಗಿನಕಾಯಿತುರಿ, ಮಾವಿನಕಾಯಿ, ಉಪ್ಪು ‌ಹಾಕಿ ಚೆನ್ನಾಗಿ ರುಬ್ಬಿ.
ನಂತರ ಬಾಣಲೆಯಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ. ‌ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕರಿಬೇವು, ಮುರಿದ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಕೊಡಿ.
ಬಳಿಕ ರುಬ್ಬಿ ಇಟ್ಟುಕೊಂಡ ಚಟ್ನಿಗೆ ಒಗ್ಗರಣೆಯನ್ನು ಸೇರಿಸಿ. ರುಚಿಯಾದ ಕೆಸುವಿನ ಚಟ್ನಿ ‌ಸವಿಯಲು‌ ಸಿದ್ಧ.

ಸಬ್ಬಕ್ಕಿ – ಹೆಸರುಬೇಳೆ ದೋಸೆ

ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ 1/2 ಕಪ್
ಹೆಸರು ಬೇಳೆ 1 ಕಪ್
ಕ್ಯಾರೆಟ್ 1
ಈರುಳ್ಳಿ 1
ಟೊಮ್ಯಾಟೊ 1
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನಕಾಯಿ ತುರಿ 2 ಚಮಚ

Saakshatv cooking recipe sabbakki hesaru bele dosa

ಮಾಡುವ ವಿಧಾನ

ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಅದನ್ನು 4 ಗಂಟೆಗಳ ಕಾಲ ಮುಳುಗುವಷ್ಟು ನೀರಿನಲ್ಲಿ ನೆನೆಯಲು ಬಿಡಿ.
ಹೆಸರುಬೇಳೆಯನ್ನು ಸಹ ಚೆನ್ನಾಗಿ ತೊಳೆದು 2 – 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ಬಳಿಕ ಸಬ್ಬಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ‌ ರುಬ್ಬಿ. ನಂತರ ಅದಕ್ಕೆ ಹೆಸರು‌ ಬೇಳೆ ಸೇರಿಸಿ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ‌ಚೆನ್ನಾಗಿ‌‌ ರುಬ್ಬಿ. ಈ ಮಿಶ್ರಣಕ್ಕೆ ಉಪ್ಪು ‌ಸೇರಿಸಿ‌ ಚೆನ್ನಾಗಿ ‌ಕಲಸಿ ಸ್ವಲ್ಪ ‌ಹೊತ್ತು‌ ಮುಚ್ಚಳ ಮುಚ್ಚಿ ಹಾಗೆಯೆ ಬಿಡಿ.

ನಂತರ ‌ಕ್ಯಾರೆಟ್, ಈರುಳ್ಳಿ, ಟೊಮೆಟೊ, ಹಸಿಮೆಣಸು, ಕೊತ್ತಂಬರಿ ಸೊಪ್ಪುಗಳನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪಕ್ಕದಲ್ಲಿ ಇಡಿ.
ಈಗ ದೋಸೆ ತವೆಗೆ ತುಪ್ಪ ಸವರಿ ಬಿಸಿ ‌ಮಾಡಿ. ದೋಸೆ ಹಿಟ್ಟು ಹೊಯ್ಯಿದು ಸ್ವಲ್ಪ ದಪ್ಪವಾಗಿ ದೋಸೆ ‌ಮಾಡಿ. ಮೇಲೆ ತುಪ್ಪ ಹಾಕಿ ತರಕಾರಿಗಳ ಮಿಶ್ರಣವನ್ನು ಸಿಂಪಡಿಸಿ. ಇನ್ನೊಂದು ಬದಿ ತಿರುವಿ‌ ಹಾಕಿ ಚೆನ್ನಾಗಿ ಕಾಯಿಸಿ. ಈಗ ರುಚಿಯಾದ ಸಬ್ಬಕ್ಕಿ ಹೆಸರುಬೇಳೆ ದೋಸೆ ಕಾಯಿಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

 

Tags: cooking recipiesFoodviral saakshatv
ShareTweetSendShare
Join us on:

Related Posts

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

by Shwetha
August 28, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ ಅವರ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಅಧಿಕಾರ...

ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

by Shwetha
August 28, 2026
0

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು...

ನೇಪಾಳದಲ್ಲಿ ಭೀಕರ ಪ್ರವಾಹ; ಕೈಲಾಸ ಮಾನಸ ಸರೋವರ ಯಾತ್ರೆಯ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ; ಕೈಲಾಸ ಮಾನಸ ಸರೋವರ ಯಾತ್ರೆಯ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆ

by Shwetha
August 28, 2026
0

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದಂತೆ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು...

ರವಿ ತೇಜ ಇರುಮುಡಿ ಚಿತ್ರಕ್ಕೆ ಮಾರುಹೋದ ರಶ್ಮಿಕಾ: ಇದಪ್ಪಾ ಸಿನಿಮಾ ಅಂದ್ರೆ ಎಂದು ಬಣ್ಣಿಸಿದ ನ್ಯಾಷನಲ್ ಕ್ರಷ್

ರವಿ ತೇಜ ಇರುಮುಡಿ ಚಿತ್ರಕ್ಕೆ ಮಾರುಹೋದ ರಶ್ಮಿಕಾ: ಇದಪ್ಪಾ ಸಿನಿಮಾ ಅಂದ್ರೆ ಎಂದು ಬಣ್ಣಿಸಿದ ನ್ಯಾಷನಲ್ ಕ್ರಷ್

by Shwetha
August 28, 2026
0

ಮಾಸ್ ಮಹಾರಾಜ ರವಿ ತೇಜ ಅಭಿನಯದ ಇತ್ತೀಚಿನ ಚಿತ್ರ ಇರುಮುಡಿ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ...

ಕ್ಲಬ್ ಮತ್ತು ಚರ್ಚ್‌ಗಳು ನೊಂದಣಿಯಾಗಿವೆಯೇ?ಸಣ್ಣ ಪುಸ್ತಕ ಬಿಟ್ಟು ಅಂಬೇಡ್ಕರ್ ಸಂವಿಧಾನ ಓದಿ:  ಬ್ರಿಟಿಷರಿಗೇ ಸಾಧ್ಯವಾಗದ್ದು ಪ್ರಿಯಾಂಕ್ ಖರ್ಗೆ ನಿಮ್ಮಿಂದ ಸಾಧ್ಯವೇ? ಆರ್‌ಎಸ್‌ಎಸ್ ಬೆನ್ನಿಗೆ ನಿಂತ ವಿಪಕ್ಷ ನಾಯಕ

ಕ್ಲಬ್ ಮತ್ತು ಚರ್ಚ್‌ಗಳು ನೊಂದಣಿಯಾಗಿವೆಯೇ?ಸಣ್ಣ ಪುಸ್ತಕ ಬಿಟ್ಟು ಅಂಬೇಡ್ಕರ್ ಸಂವಿಧಾನ ಓದಿ: ಬ್ರಿಟಿಷರಿಗೇ ಸಾಧ್ಯವಾಗದ್ದು ಪ್ರಿಯಾಂಕ್ ಖರ್ಗೆ ನಿಮ್ಮಿಂದ ಸಾಧ್ಯವೇ? ಆರ್‌ಎಸ್‌ಎಸ್ ಬೆನ್ನಿಗೆ ನಿಂತ ವಿಪಕ್ಷ ನಾಯಕ

by Shwetha
August 28, 2026
0

ಬೆಂಗಳೂರು: ಆರ್‌ಎಸ್‌ಎಸ್ ನೊಂದಣಿ ವಿಷಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಮತ್ತು ಹಾಕಿದ್ದ ಸವಾಲಿಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಭರ್ಜರಿ ತಿರುಗೇಟು ನೀಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram