5 ಸಿಂಪಲ್ / ಆರೋಗ್ಯಕರ / ರುಚಿಕರ ಅಡುಗಡೆಗಳ ರೆಸಿಪಿಗಳು..!

1 min read

ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್

ಬೇಕಾಗುವ ಪದಾರ್ಥಗಳು:

ಅಕ್ಕಿ – 2 ಕಪ್
ತರಕಾರಿಗಳು (ಬೀನ್ಸ್ ಕ್ಯಾರೆಟ್ ಈರುಳ್ಳಿ ಕ್ಯಾಪ್ಸಿಕಂ ಎಲೆಕೋಸು)
ಚಿಕ್ಕದಾಗಿ ಹೆಚ್ಚಿದ‌ ಹಸಿಮೆಣಸು 6
ಈರುಳ್ಳಿ 2
ಬೆಳ್ಳುಳ್ಳಿ 4 ಎಸಳು
ಶುಂಠಿ 1 ಇಂಚು
ಮೆಣಸಿನ ಪುಡಿ – 11/2 ಟೀಸ್ಪೂನ್
ಸೋಯಾ ಸಾಸ್ 2/3 ಟೀಸ್ಪೂನ್
ವಿನೆಗರ್ 2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
Saakshatv cooking recipe fried rice

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಜಜ್ಜಿದ ಬೆಳ್ಳುಳ್ಳಿ ಶುಂಠಿ ಮತ್ತು ಹಸಿಮೆಣಸು ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಅದನ್ನು ಫ್ರೈ ಮಾಡಿ.
Saakshatv cooking recipe fried rice
ನಂತರ ಸೋಯಾ ಸಾಸ್, ವಿನೆಗರ್, ಉಪ್ಪು, ಮೆಣಸಿನ ಹುಡಿ ಸೇರಿಸಿ ಹುರಿಯಿರಿ. ತರಕಾರಿ ಬೆಂದ ಬಳಿಕ‌ ಮಾಡಿಟ್ಟುಕೊಂಡ ಅನ್ನ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈಗ ವೆಜಿಟೇಬಲ್ ಫ್ರೈಡ್ ರೈಸ್ ಸಿದ್ಧವಾಗಿದೆ. ಇದನ್ನು ಸಾಸ್‌ನೊಂದಿಗೆ ಸವಿಯಿರಿ.

ಹೆಸರು ಬೇಳೆ ಚಕ್ಕುಲಿ

ಬೇಕಾಗುವ ಪದಾರ್ಥಗಳು

1 ಕಪ್ ಮೈದಾ
1 ಕಪ್ ಅಕ್ಕಿ ಹಿಟ್ಟು
½ ಕಪ್ ಹೆಸರು ಬೇಳೆ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
½ ಟೀಸ್ಪೂನ್ ಅರಿಶಿನ ಪುಡಿ
1-2 ಟೀಸ್ಪೂನ್ ಕೊತ್ತಂಬರಿ ಪುಡಿ
1 ಟೀಸ್ಪೂನ್ ಎಳ್ಳು
½ ಟೀಸ್ಪೂನ್ ಕ್ಯಾರಮ್ ಸೀಡ್ಸ್ / ಅಜ್ವೈನ್
2 ಟೀಸ್ಪೂನ್ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಡೀಪ್ ಫ್ರೈಗೆ ಎಣ್ಣೆ

ಮಾಡುವ ವಿಧಾನ

ಹೆಸರು ಬೇಳೆಯನ್ನು 2-3 ಬಾರಿ ತೊಳೆಯಿರಿ. ನಂತರ ಕುಕ್ಕರ್ ನಲ್ಲಿ ¾ ಕಪ್ ನೀರು ಸೇರಿಸಿ, 2-3 ವಿಸಲ್ ಹೊಡಿಯುವವರೆಗೆ ಬೇಯಿಸಿ.‌ ನಂತರ ತಣ್ಣಗಾಗಲು ಬಿಡಿ.

ಬಳಿಕ ಕುಕ್ಕರ್ ಕಂಟೇನರ್ ನಲ್ಲಿ ಮೈದಾವನ್ನು ತೆಗೆದುಕೊಳ್ಳಿ. ಅದನ್ನು ಪ್ಲೇಟ್ ಬಳಸಿ ಮುಚ್ಚಿ ನಂತರ 10 ನಿಮಿಷಗಳ ಕಾಲ ವಿಸಲ್ ಇಲ್ಲದೆ ಬಿಸಿ ಮಾಡಿ, ತಣ್ಣಗಾಗಲು ಬಿಡಿ.
ತಣ್ಣಗಾದ ಹೆಸರು ಬೇಳೆಯನ್ನು ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
ಬೇಯಿಸಿದ ಮೈದಾವನ್ನು ಮಿಕ್ಸಿಂಗ್ ಬೌಲ್‌ಗೆ ಸೇರಿಸಿ. ಈಗ ಅದಕ್ಕೆ ಅಕ್ಕಿ ಹಿಟ್ಟು, ಬೇಯಿಸಿದ ಹೆಸರು ಬೇಳೆ, ಎಣ್ಣೆ ಮತ್ತು ಎಲ್ಲಾ ಒಣ ಮಸಾಲೆ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಹಿಟ್ಟನ್ನು ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಅಗತ್ಯವಿದ್ದರೆ ¼ ಕಪ್ ನೀರನ್ನು ಬಳಸಿ.

ನಂತರ ಹಿಟ್ಟಿನ ಚೆಂಡನ್ನು ಚಕ್ಕುಲಿ ಅಚ್ಚಿನಲ್ಲಿ ಹಾಕಿ ಚಕ್ಲಿಗಳನ್ನು ತಯಾರಿಸಲು ಪ್ರಾರಂಭಿಸಿ. ಆಳವಾದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ತಯಾರಾದ ಚಕ್ಲಿಯನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೆ ಫ್ರೈ ಮಾಡಿ ತೆಗೆಯಿರಿ.
ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ, ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಆರೋಗ್ಯಕರ ದೊಡ್ಡಪತ್ರೆ ಬಜ್ಜಿ

ಬೇಕಾಗುವ ಸಾಮಗ್ರಿಗಳು

ದೊಡ್ಡಪತ್ರೆ ಎಲೆ – 15
ಕಡಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಮೆಣಸಿನ ಹುಡಿ 1 1/2 ಚಮಚ
ಓಮ 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಇಂಗು
ಜೀರಿಗೆ ಪುಡಿ 1/2 ಚಮಚ

ಮಾಡುವ ವಿಧಾನ

ದೊಡ್ಡಪತ್ರೆ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಎಲೆಗಳಲ್ಲಿನ ನೀರನ್ನು ಒರೆಸಿ.
ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಓಮ, ಇಂಗು, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ ಕಲಸಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ದೊಡ್ಡಪತ್ರೆ ಎಲೆಗಳನ್ನು ಸಿದ್ಧಪಡಿಸಿಕೊಂಡ ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹುರಿದರೆ ಬಿಸಿಯಾದ ದೊಡ್ಡಪತ್ರೆ ಬಜ್ಜಿ ಸವಿಯಲು ರೆಡಿ. ಇದನ್ನು ಚಟ್ನಿಯ ಜೊತೆ ಸವಿಯಿರಿ.

ಪನ್ನೀರ್ ಬಿರಿಯಾನಿ

ಬೇಕಾಗುವ ಸಾಮಾಗ್ರಿಗಳು

ಪನ್ನೀರ್ – 1 ಕಪ್
ಭಾಸ್ಮತಿ ಅಕ್ಕಿ 1 ಕಪ್

ಪಲಾವ್ ಎಲೆ 2,
ಚಕ್ಕೆ 1,
ಲವಂಗ 4,
ಏಲಕ್ಕಿ 2,
ಗೋಡಂಬಿ 8-10,
ಪುದೀನಾ ಸೊಪ್ಪು 1 ಕಟ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5-6
ಶುಂಠಿ – ಸಣ್ಣ ತುಂಡು
ಸೋಂಪು – 1 ಚಮಚ
ಗಟ್ಟಿ ಮೊಸರು – 2 ಚಮಚ

ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1,
ಸಣ್ಣಗೆ ಕತ್ತರಿಸಿದ ಹಸಿಮೆಣಸು – 2
ಹೆಚ್ಚಿದ ಟೊಮೆಟೊ – 1

ಮೆಣಸಿನ ಪುಡಿ 1 ಚಮಚ,
ಬಿರಿಯಾನಿ ಮಸಾಲಾ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe how to cook paneer biryani

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಕತ್ತರಿಸಿಕೊಂಡ ಪನ್ನೀರ್ ತುಂಡುಗಳನ್ನು ಸ್ವಲ್ಪ ಕೆಂಪಗೆ ಆಗುವವರೆಗೆ ಹುರಿಯಿರಿ.
ನಂತರ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ, ಸೋಂಪ್ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಅದಕ್ಕೆ 2 ಚಮಚ ಗಟ್ಟಿ ಮೊಸರು ಸೇರಿಸಿ ಮತ್ತೊಮ್ಮೆ ರುಬ್ಬಿ.

ಈಗ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಗಳನ್ನು ಹುರಿಯಿರಿ. ನಂತರ
ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಹುರಿಯಿರಿ.
ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಉಪ್ಪು, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಹುರಿದಿಟ್ಟುಕೊಂಡ ಪನ್ನೀರ್ ಸೇರಿಸಿ ಚೆನ್ನಾಗಿ ಬೆರೆಸಿ.

ಈಗ ಈ ಮಿಶ್ರಣಕ್ಕೆ ಅರ್ಧ ಗಂಟೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ. (1 ಅಳತೆಗೆ ಒಂದುವರೆ ಅಳತೆ ನೀರು) ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಬರುವವರೆಗೆ ಬೇಯಿಸಿ.
ರುಚಿಯಾದ ಪನ್ನೀರ್ ಬಿರಿಯಾನಿ ರೆಡಿಯಾಗಿದೆ. ಇದನ್ನು ರಾಯತ ಜೊತೆ ಸವಿಯಿರಿ.

ರೆಸ್ಟೋರೆಂಟ್ ‌ಸ್ಟೈಲ್ ಪನೀರ್ ಟಿಕ್ಕ

ಬೇಕಾಗುವ ಪದಾರ್ಥಗಳು

ಪನೀರ್ ತುಂಡು – 1 ½ ಕಪ್
ತ್ರಿಕೋನಾಕಾರದಲ್ಲಿ ಕತ್ತರಿಸಿದ ಕ್ಯಾಪ್ಸಿಕಂ – 1 ಕಪ್
ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ – 1ಕಪ್
ಮೊಸರು – ¾ ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಬ್ಲಾಕ್ ಸಾಲ್ಟ್ – ½ ಟೀಸ್ಪೂನ್
ಕಸೂರಿ ಮೆಥಿ – 1 ಟೀಸ್ಪೂನ್
ಪಿಂಚ್ ಇಂಗ್
ತಂದೂರಿ ಮಸಾಲ – 1 ಟೀಸ್ಪೂನ್ (optional)
ತುರಿದ ಶುಂಠಿ – 1-2 ಟೀಸ್ಪೂನ್
ನಿಂಬೆ ರಸ – 1-2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
Saakshatv cooking recipe restaurant style Paneer Tikka

ಮಾಡುವ ವಿಧಾನ

ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಮೊಸರು ಸೇರಿಸಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ತಂದೂರಿ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ, ಬ್ಲಾಕ್ ಸಾಲ್ಟ್, ಉಪ್ಪು, ಕಸೂರಿ ಮೆಥಿ, ಪಿಂಚ್ ಹಿಂಗ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.

ನಂತರ ತುರಿದ ಶುಂಠಿ ಮತ್ತು ನಿಂಬೆ ರಸವನ್ನು ಸೇರಿಸಿ. ಪುನಃ ಕಲಸಿ ನಯವಾದ ಪೇಸ್ಟ್ ಮಾಡಿ.

ಮೊಸರು ಮಿಶ್ರಣಕ್ಕೆ ಪನೀರ್ ತುಂಡು, ಕ್ಯಾಪ್ಸಿಕಂ‌
ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.‌10 ನಿಮಿಷಗಳ ಕಾಲ ಹಾಗೆಯೇ ಇರಿಸಿ.

ಮ್ಯಾರಿನೇಟ್ ಮಾಡಿದ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿ ತುಂಡುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ, ಅದನ್ನು 20-30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ.
Saakshatv cooking recipe restaurant style Paneer Tikka

ನಂತರ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಮರದ ಕಡ್ಡಿಯನ್ನು ಓರೆಯಾಗಿ ಚುಚ್ಚಿ.

ಈಗ ಹೆಚ್ಚಿನ ತಾಪಮಾನದಲ್ಲಿ ತಂದೂರಿನಲ್ಲಿ ಅಥವಾ ಒವನ್‌ ನಲ್ಲಿ ಕಾಯಿಸಿ.‌ ಬೇಕಿಂಗ್ ಶೀಟ್ ತೆಗೆದುಕೊಂಡು ಅದನ್ನು ಅಲ್ಯೂಮಿನಿಯಂ ಫಾಯಿಲ್ ಪೇಪರ್ ಬಳಸಿ ಮುಚ್ಚಿ, ನಂತರ ಅದರ ಮೇಲೆ ತಯಾರಾದ ತುಂಡುಗಳನ್ನು ಜೋಡಿಸಿ, ಎಣ್ಣೆಯನ್ನು ಸಿಂಪಡಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.

ನೀವು ಒಲೆಯನ್ನು ಬಳಸುವುದಾದರೆ ಸ್ವಲ್ಪ ಎಣ್ಣೆಯನ್ನು ಬಳಸಿ ಮ್ಯಾರಿನೇಟ್ ಮಾಡಿದ‌ ತುಂಡುಗಳನ್ನು ಗ್ರಿಡ್ಲ್ ಅಥವಾ ತವಾ ಮೇಲೆ ಹುರಿಯಬಹುದು.

ಎಲ್ಲಾ ಬದಿಗಳನ್ನು ಸರಿಯಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು.

ಈಗ ಪನೀರ್ ಟಿಕ್ಕ ಸಿದ್ಧವಾಗಿದೆ. ನೀವು ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ, ನಿಂಬೆ ರಸವನ್ನು ಸಿಂಪಡಿಸಬಹುದು ಮತ್ತು ರುಚಿಯಾದ ಪನೀರ್ ಟಿಕ್ಕಾವನ್ನು ಪುದೀನ ಚಟ್ನಿಯೊಂದಿಗೆ ಸವಿಯಬಹುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd