5 ಸಿಂಪಲ್ ಮತ್ತು ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
ಶ್ಯಾವಿಗೆ ಆಲೂ ಬೋಂಡಾ
ಬೇಕಾಗುವ ಸಾಮಾಗ್ರಿಗಳು
ಶ್ಯಾವಿಗೆ – 1 ಕಪ್
ಆಲೂಗಡ್ಡೆ – 2
ಬೀನ್ಸ್ – 4
ಈರುಳ್ಳಿ 1
ಜೀರಿಗೆ – 1 ಚಮಚ
ಚಿಲ್ಲಿ ಫ್ಲೆಕ್ಸ್ – 1 ಚಮಚ
ಕಡಲೆ ಹಿಟ್ಟು 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ.
ಆಂಚೂರ್ ಪೌಡರ್ 1/4 ಚಮಚ.
ನಿಂಬೆ ರಸ 1/2 ಚಮಚ.
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಈರುಳ್ಳಿ, ಶಾವಿಗೆ, ಜೀರಿಗೆ ಪುಡಿ, ಚಿಲ್ಲಿ ಫ್ಲೆಕ್ಸ್, ಆಂಚೂರ್ ಪೌಡರ್ , ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಉಂಡೆಗಳನ್ನು ಕೆಂಪಗೆ ಕರಿದು ತೆಗೆಯಿರಿ. ರುಚಿಯಾದ ಶ್ಯಾವಿಗೆ ಆಲೂ ಬೋಂಡಾ ಸವಿಯಲು ಸಿದ್ಧ.
ಸಬ್ಬಕ್ಕಿ ಖೀರ್
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ – 1 ಕಪ್
ಹಾಲು – 1 ಲೀಟರ್
ಸಕ್ಕರೆ – 1 ಕಪ್
ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
ನೀರು – 1ಕಪ್
ಮಾಡುವ ವಿಧಾನ :
ಸಬ್ಬಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ನೀರನ್ನು ಸೋಸಿ ತೆಗೆಯಿರಿ. ಸಬ್ಬಕ್ಕಿಯನ್ನು ಒಂದು ಬೌಲ್ ಗೆ ಹಾಕಿ ಹಾಲನ್ನು ಸೇರಿಸಿ. ನಂತರ ಇದನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ, ಸುಮಾರು 20 ನಿಮಿಷ ಕಾಲ ಸಣ್ಣ ಉರಿಯಲ್ಲಿ ಕುದಿಸಿ.
ನಂತರ ಒಂದು ಬೌಲ್ ಗೆ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗಿದ ನಂತರ ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಈ ಸಕ್ಕರೆ ನೀರನ್ನು ಬೆರೆಸಿ. ಈ ಮಿಶ್ರಣ ಖೀರ್ ಪ್ರಮಾಣಕ್ಕೆ ಗಟ್ಟಿಯಾಗುವವರೆಗೆ ಕುದಿಸಿ.
ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ರುಚಿಯಾದ ಸಬ್ಬಕ್ಕಿ ಖೀರ್ ಸವಿಯಿರಿ.
ಬಾದಾಮಿ – ಗೇರು ಬೀಜ ಚಿಕ್ಕಿ
ಬೇಕಾಗುವ ಸಾಮಗ್ರಿಗಳು
ಬೆಣ್ಣೆ – 2 ದೊಡ್ಡ ಚಮಚ
ಸಕ್ಕರೆ – 1 ಕಪ್
ಬಾದಾಮಿ – 1/2 ಕಪ್
ಗೇರು ಬೀಜ – 1/2 ಕಪ್
ಒಣಗಿಸಿದ ಗುಲಾಬಿ ಎಸಳು -1 ಕಪ್
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
ಮೊದಲನೆಯದಾಗಿ, ಬಾಣಲೆಯಲ್ಲಿ ಕತ್ತರಿಸಿದ ಬಾದಾಮಿ, ಗೋಡಂಬಿ ತೆಗೆದುಕೊಂಡು ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಿ ಪಕ್ಕದಲ್ಲಿ ಇರಿಸಿ.
ನಂತರ ದಪ್ಪತಳದ ಪಾತ್ರೆಯೊಂದರಲ್ಲಿ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ , ಚಿಟಿಕೆ ಉಪ್ಪನ್ನು ಸೇರಿಸಿ. ಸಕ್ಕರೆ ಕರಗುವವರೆಗೆ ಚೆನ್ನಾಗಿ ಬೆರೆಸಿ.
ಸಕ್ಕರೆ ಬಣ್ಣ ತಿಳಿ ಕಂದು ಬರುವವರಗೆ ಚೆನ್ನಾಗಿ ಬೆರೆಸಿ ನಂತರ ಗ್ಯಾಸ್ ಆಫ್ ಮಾಡಿ.ಬಳಿಕ ಇದಕ್ಕೆ ಬಾದಾಮಿ, ಗೋಡಂಬಿ ಡ್ರೈ ರೋಸ್ಟ್ ಹಾಗೂ ಒಣಗಿದ ಗುಲಾಬಿ ಎಸಳು ಹಾಕಿ ಚೆನ್ನಾಗಿ ಕಲಸಿ. ನಂತರ ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ . ಬಿಸಿ ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
ವೆಜ್ ಪನೀರ್ ಫ್ರೈಡ್ ರೈಸ್
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1 ಕಪ್
ಪನೀರ್ – ಸ್ವಲ್ಪ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು ಆನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ.ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಹುರಿಯಿರಿ. ಬಳಿಕ ಪನೀರ್ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧ.
ಗೋಧಿ ಬಾದಾಮಿ ಲಡ್ಡು
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ಬಾದಾಮಿ ಪುಡಿ – 1 ಕಪ್
ಒಣ ಖರ್ಜೂರ ಪುಡಿ – 3/4 ಕಪ್
ಏಲಕ್ಕಿ ಪುಡಿ – 1 ಚಮಚ
ಓಟ್ಸ್ ಪುಡಿ – 1/2 ಕಪ್
ಕಮಲದ ಬೀಜದ ಪುಡಿ – 1/2 ಕಪ್
ತೆಂಗಿನಕಾಯಿ ಹುಡಿ – 2 ಚಮಚ
ಮಾಡುವ ವಿಧಾನ
ಮೊದಲಿಗೆ ತುಪ್ಪವನ್ನು ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಸೇರಿಸಿ ಮತ್ತು ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಹುರಿಯಿರಿ. ಬಣ್ಣದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿದ್ದಂತೆ ಬಾದಾಮಿ ಪುಡಿ, ಒಣ ಖರ್ಜೂರ ಪುಡಿ, ಏಲಕ್ಕಿ ಪುಡಿ, ಓಟ್ಸ್ ಪುಡಿ, ಕಮಲದ ಬೀಜದ ಪುಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ನಂತರ ಸ್ವಲ್ಪ ತಣ್ಣಗಾಗಿಸಿ. ಬಳಿಕ ಅಗತ್ಯವಿದ್ದರೆ ತುಪ್ಪವನ್ನು ಸೇರಿಸಿ ಚೆನ್ನಾಗಿ ನಾದಿ. ನಂತರ ಸಣ್ಣ ಸಣ್ಣ ಲಡ್ಡುಗಳನ್ನು ಮಾಡಿ ತೆಂಗಿನಕಾಯಿ ಹುಡಿ ಮೇಲೆ ಉರುಳಿಸಿ. ಈಗ ರುಚಿಯಾದ ಗೋಧಿ ಬಾದಾಮಿ ಲಡ್ಡು ಸವಿಯಲು ಸಿದ್ಧವಾಗಿದೆ.