ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್ ಸಿ ತಂಡವನ್ನು ಮಣಿಸಿದ ಓಡಿಶಾ..!

1 min read

ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್ ಸಿ ತಂಡವನ್ನು ಮಣಿಸಿದ ಓಡಿಶಾ..!

ಗೋವಾ: ಭರವಸೆಯ ಆಟಗಾರ ಜೇವಿಯರ್ ಎಚ್. ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಓಡಿಶಾ ತಂಡ 3-1 ರಿಂದ ಬೆಂಗಳೂರು ಎಫ್ ಸಿ ತಂಡವನ್ನು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಮಣಿಸಿದೆ.
ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಓಡಿಶಾ ಮೊದಲ ಗೋಲಿನ ನಗೆ ಬೀರಿತು. ಮೂರನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಜೇವಿಯರ್ ಉತ್ತಮ ಕಾಲ್ಚಳಕದ ಪ್ರದರ್ಶನ ನೀಡಿದರು. ಬಿಎಫ್ ಸಿ ತಂಡದ ಗೋಲ್ ಕೀಪರ್ ಅವರನ್ನು ವಂಚಿಸುವಲ್ಲಿ ಸಫಲರಾದರು.
ಮೊದಲಾವಧಿಯಲ್ಲಿ ಹಿನ್ನಡೆಯೊಂದಿಗೆ ಆಟ ಮುಂದುವರಿಸಿದ ಬೆಂಗಳೂರು ಒತ್ತಡವನ್ನು ಮೆಟ್ಟಿನಿಂತು ಗೋಲು ಗಳಿಸುವತ್ತ ಚಿತ್ತ ನೆಟ್ಟಿತು. ಈ ಅವಧಿಯ 21ನೇ ನಿಮಿಷದಲ್ಲಿ ಅಲನ್ ಕೋಸ್ಟಾ ಸೊಗಸಾದ ಗೋಲ್ ಬಾರಿಸಿ ಅಂತರವನ್ನು ಸಮನಾಗಿಸಿದರು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿ ಸಮನಾಗಿಸಿದ್ದವು.
ಎರಡನೇ ಅವಧಿಯಲ್ಲಿ ಗೋಲು ಬಾರಿಸಿ ಓಡಿಶಾ ತಂಡದ ಮೇಲೆ ಒತ್ತಡ ಹೇರುವ ತಂತ್ರವನ್ನು ಹೆಣೆದುಕೊಂಡಿದ್ದ ಬೆಂಗಳೂರು ತಂಡಕ್ಕೆ ನಿರಾಸೆ ಕಾದಿತ್ತು. ಈ ಅವಧಿಯಲ್ಲಿ ಬಿಎಫ್ ಸಿ ಗೋಲು ಗಳಿಸುವಲ್ಲಿ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಓಡಿಶಾ ಎರಡು ಗೋಲು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd