89 ವರ್ಷದ ಟೆಸ್ಟ್ ಇತಿಹಾಸ ಬ್ರೇಕ್ ಮಾಡಲಿದೆ ಕೊಹ್ಲಿ ಗ್ಯಾಂಗ್

1 min read

89 ವರ್ಷದ ಟೆಸ್ಟ್ ಇತಿಹಾಸ ಬ್ರೇಕ್ ಮಾಡಲಿದೆ ಕೊಹ್ಲಿ ಗ್ಯಾಂಗ್

ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯಲ್ ಶಿಪ್ ಫೈನಲ್ ಗೆ ಸಜ್ಜಾಗಿ ನಿಂತಿರುವ ಕೊಹ್ಲಿ ಗ್ಯಾಂಗ್ ಹೊಸದೊಂದು ದಾಖಲೆಗೆ ಪಾತ್ರವಾಗಲಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಕಣಕ್ಕಿಳಿಯುವ ಮೂಲಕ ಯಂಗ್ ಇಂಡಿಯಾ 89 ವರ್ಷದ ಟೆಸ್ಟ್ ಇತಿಹಾಸ ಬ್ರೇಕ್ ಮಾಡಲಿದೆ.

ಹೌದು..! ಸದ್ಯ ಟೀಂ ಇಂಡಿಯಾದ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನತ್ತ ನೆಟ್ಟಿದೆ.

ಟೆಸ್ಟ್ ಕ್ರಿಕೆಟ್ ನ ಚಾಂಪಿಯನ್ಸ್ ಆಗಿ ಮೆರೆದಾಡುವುದಕ್ಕೆ ಯಂಗ್ ಇಂಡಿಯಾಗೆ ಇನ್ನೋಂದೇ ಹೆಜ್ಜೆ ಬಾಕಿ ಇದೆ. ಹೀಗಾಗಿ ಬಿಸಿಸಿಐ ಬಲಿಷ್ಠ ಆಟಗಾರರನ್ನೇ ಇಂಗ್ಲೆಂಡ್ ಗೆ ಕಳುಹಿಸುತ್ತಿದೆ.

ಕಿವೀಸ್ ವಿರುದ್ಧದ ಈ ಹೈ ವೋಲ್ಟೇಜ್ ಟೆಸ್ಟ್ ಪಂದ್ಯಕ್ಕೆ ಉಭಯ ದೇಶದ ಕ್ರಿಕೆಟ್ ಮಂಡಳಿ ಸೌತಾಂಪ್ಟನ್ ಮೈದಾನವನ್ನ ಆಯ್ಕೆ ಮಾಡಿಕೊಂಡಿವೆ.

ಹೀಗಾಗಿ ಮುಂದಿನ ತಿಂಗಳು ಭಾರತ – ನ್ಯೂಜಿಲ್ಯಾಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ನಡೆಯಲಿದೆ.

indian

ವಿಶೇಷ ಏನಂದರೇ 89 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಪಂದ್ಯದಲ್ಲಿ ಭಾರತ ಮೊದಲ ಸಲ ಭಾಗಿಯಾಗುತ್ತಿದೆ.

ಅಂದರೇ ಭಾರತ ಟೆಸ್ಟ್ ತಂಡ ಇದುವರೆಗೂ ತಟಸ್ಥ ಸ್ಥಳದಲ್ಲಿ ಒಂದೇ ಒಂದು ಪಂದ್ಯವನ್ನಾಡಿಲ್ಲ.

ಐಸಿಸಿಯಿಂದ ಟೆಸ್ಟ್ ಸ್ಥಾನಮಾನ ಪಡೆದ 12 ದೇಶಗಳ ಪೈಕಿ, ಭಾರತ ಹಾಗೂ ಬಾಂಗ್ಲಾದೇಶ ಇಲ್ಲಿಯವರೆಗೆ ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯ ಆಡಿಲ್ಲ.

ಆದರೆ, ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗುವ ಮೂಲಕ ಭಾರತ ಈ ರೆಕಾರ್ಡ್ ಬ್ರೇಕ್ ಮಾಡಲಿದೆ.

ಈ ಹಿಂದೆ 1999ರಲ್ಲಿ ತಟಸ್ಥ ಸ್ಥಳದಲ್ಲಿ ಭಾರತ ಟೆಸ್ಟ್ ಪಂದ್ಯ ಆಡುವ ಪಡೆದುಕೊಂಡಿತ್ತು.

ಆದರೆ, ಏಷ್ಯನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಲು ವಿಫಲಗೊಂಡಿದ್ದರಿಂದ ಪಾಕಿಸ್ತಾನ – ಶ್ರೀಲಂಕಾ ಇದರಲ್ಲಿ ಭಾಗಿಯಾಗಿ ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯ ಆಡಿದ್ದವು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd