ದೇಶದಲ್ಲಿ ಲೋಕಸಭಾ ಕಾವು ರಂಗೇರಿದೆ. ಪ್ರಧಾನಿ ಮೋದಿ ಆದಿಯಾಗಿ ಎಲ್ಲ ನಾಯಕರು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಈ ನಡುವೆ ವಿದೇಶಿ ನಾಯಕರು ಮೋದಿ ಪರ ಪ್ರಚಾರಕ್ಕಾಗಿ ದೇಶಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಈ ಬಾರಿಯೂ ಅಧಿಕಾರಕ್ಕೆ ಏರಬೇಕೆಂಬ ಛಲದೊಂದಿಗೆ ಬಿಜೆಪಿ ನೇತೃತ್ವದ ಎನ್ ಡಿಎ 400ಕ್ಕಿಂತ ಅಧಿಕ ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿಯೇ ಬಿಜೆಪಿ ಪ್ರಚಾರ ಕಾರ್ಯ ಆರಂಭವಾಗಿವೆ. ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇದರ ಮಧ್ಯೆಯೇ ವಿದೇಶಿ ನಾಯಕರು ಆಗಮಿಸುತ್ತಿರುವ ಸುದ್ದಿ ಹಬ್ಬಿದೆ.
ಸದ್ಯದ ಮಾಹಿತಿಯಂತೆ ಬಿಜೆಪಿಯು 25 ರಾಷ್ಟ್ರಗಳ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ. ಇಲ್ಲಿಯವರೆಗೆ 13 ಪಕ್ಷಗಳು ಬಿಜೆಪಿಯ ಆಹ್ವಾನ ಸ್ವೀಕರಿಸಿವೆ ಎನ್ನಲಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ಎರಡು ರಾಜಕೀಯ ಪಕ್ಷಗಳಿಗೆ ಆ ದೇಶದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಆಹ್ವಾನ ನೀಡಿಲ್ಲ.
ಬಾಂಗ್ಲಾದೇಶ ಆಡಳಿತಾರೂಢ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್, ನೇಪಾಳದ ಪ್ರಮುಖ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ.