ಕೊಡಗು : ನರಭಕ್ಷಕ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಸ್ಥಳೀಯರು
ಕೊಡಗು : ಕಳೆದ ಕೆಲ ದಿನಗಳಿಂದ ವಿರಾಜಪೇಟೆ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.
ಈ ಹುಲಿ ತಾಲೂಕಿನಾದ್ಯಂತ ಹಲವಾರು ಜಾನುವಾರುಗಳನ್ನು ಮತ್ತು ಇಬ್ಬರನ್ನ ಬಲಿ ತೆಗೆದುಕೊಂಡಿತ್ತು. ನಿನ್ನೆ ಒಬ್ಬ ಯುವಕನನ್ನ ಬಲಿತೆಗೆದುಕೊಂಡಿದ್ದ ಹುಲಿ ಇಂದು ಮುಂಜಾನೆ ಕೂಲಿ ಕಾರ್ಮಿಕ ಮಹಿಳೆಯನ್ನು ಕೊಂದಿತ್ತು.
ಇದಾದ ಬಳಿಕ ಸ್ಥಳೀಯರಲ್ಲಿ ಆತಂಕ ದ್ವಿಗುಣವಾಗಿದ್ದು, ಹುಲಿಯನ್ನ ಸೆರೆ ಹಿಡಿಯುವಂತೆ ಪಟ್ಟು ಹಿಡಿದಿದ್ದರು.
ಸ್ಥಳೀಯರ ಒತ್ತಾಯದ ಮೇರೆಗೆ ಹುಲಿಯೊಂದನ್ನು ಅಭಿಮನ್ಯು ನೇತೃತ್ವದ ಗಜಪಡೆ ಕಾರ್ಯಾಚರಣೆ ಮೂಲಕ ಶ್ರೀಮಂಗಲ ಸಮೀಪದ ಮಂಚಳ್ಳಿಯಲ್ಲಿ ಹುಲಿಯನ್ನ ಸೆರೆ ಹಿಡಿಯಲಾಗಿದೆ.