JAGADEESH SHETTER | ನಾನು ಸಂಪುಟ ಸೇರಲ್ಲ
ಹುಬ್ಬಳ್ಳಿ : ನಾನು ಸಚಿವ ಸಂಪುಟ ಸೇರುವ ವಿಚಾರದ ಬಗ್ಗೆ ಪದೇ ಪದೇ ಹೇಳಲ್ಲ. ನನ್ನ ನಿಲುವು ಸ್ಪಷ್ಟವಿದೆ. ನಾನು ಸಂಪುಟ ಸೇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ.
ಮುಖ್ಯವಾಗಿ ಸಚಿವರು ಯಾರು ಆಗಬೇಕು ಅನ್ನೋದು ಮುಖ್ಯಮಂತ್ರಿಗಳ ವಿವೇಷನೆಗೆ ಬಿಟ್ಟಿದ್ದು.
ಇನ್ನು ನಾನು ಸಂಪುಟ ಸೇರುವ ಬಗ್ಗೆ ಪದೇ ಪದೇ ಪ್ರತಿಕ್ರಿಯೆ ಕೊಡಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಸಂಪುಟ ಸೇರಲ್ಲ ಎಂದು ಸ್ಪಷ್ಟಡಿಸಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ದೇಶದಲ್ಲಿ ಇಬ್ಬರು ಸಿದ್ದು ಇದ್ದಾರೆ.
ಒಬ್ಬ ಸಿಧು ಪಂಜಾಬಿನಲ್ಲಿ ಕಾಂಗ್ರೆಸ್ ಹಾಳು ಮಾಡಿದ. ನಮ್ಮ ರಾಜ್ಯದಲ್ಲಿರುವ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಅವನತಿಗೆ ತರುತ್ತಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಮಾತನಾಡಿ, ದೇಶ ಕಾಂಗ್ರೆಸ್ ಮುಕ್ತವಾಗುತ್ತೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದೇ ರೀತಿ ಈಗ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತಿದೆ ಎಂದರು.
FORMER CM JAGADEESH SHETTER REACTION ON CABINET EXPANSION at Hubballi