1983 World Cup : ಸೆಮೀಸ್ ಹೀರೋ ಯಶಪಾಲ್ ಶರ್ಮಾ ಇನ್ನಿಲ್ಲ

1 min read
yashpal-sharma

1983 World Cup : ಸೆಮೀಸ್ ಹೀರೋ ಯಶಪಾಲ್ ಶರ್ಮಾ ಇನ್ನಿಲ್ಲ

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಯಶ್ಪಾಲ್ ಶರ್ಮಾ ವಿಧಿವಶರಾಗಿದ್ದಾರೆ. ಅವರು ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಯಶ್ಪಾಲ್ ಶರ್ಮಾ 1978 ರಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅವರು 1978-83ರವರೆಗೆ ಟೀಂ ಇಂಡಿಯಾ ಮಿಡ್‍ಫೀಲ್ಡರ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

yashpal-sharma

1983 ರಲ್ಲಿ ಇಂಗ್ಲೆಂಡ್ ಆಯೋಜಿಸಿದ್ದ ವಿಶ್ವಕಪ್‍ನಲ್ಲಿ ಯಶ್ಪಾಲ್ ಶರ್ಮಾ ಭಾರತೀಯ ತಂಡದ ಸದಸ್ಯರಾಗಿದ್ದರು. ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮೀಸ್‍ನಲ್ಲಿ 61 ರನ್ ಗಳಿಸಿದ್ದ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಯಶ್ವಾಲ್ ಶರ್ಮಾ ಅವರು ಒಟ್ಟಾರೆಯಾಗಿ ಟೀಮ್ ಇಂಡಿಯಾ ಪರ 37 ಟೆಸ್ಟ್ ಪಂದ್ಯಗಳಲ್ಲಿ 1,606 ರನ್ ಮತ್ತು 42 ಏಕದಿನ ಪಂದ್ಯಗಳಲ್ಲಿ 883 ರನ್ ಗಳಿಸಿದ್ದಾರೆ. ಟೆಸ್ಟ್‍ನಲ್ಲಿ 2 ಶತಕಗಳನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd