ಬೆಂಗಳೂರು ; ಭಾರತ ಫುಟ್ ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕಾರ್ಲ್‍ಟನ್ ಚಾಪ್ಮನ್ (Carlton Chapman) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.
ಚಾಪ್ಮನ್ ತೀವ್ರ ಬೆನ್ನುನೋವಿನ ಕಾರಣಕ್ಕೆ ರವಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಐಪಿಎಲ್ 2020 – ರಿಷಬ್ ಪಂತ್ ಗಾಯ.. ಒಂದು ವಾರ ವಿಶ್ರಾಂತಿ..!
ಚಾಪ್ಮನ್ ಅವರು 1997-98ರ ಋತುವಿನಲ್ಲಿ ಫುಟ್ಬಾಲ್ ದಿಗ್ಗಜರಾದ ಐಎಂ ವಿಜಯನ್, ಜೋ ಪಾಲ್ ಹಾಗೂ ರಾಮನ್ ವಿಜಯನ್ ಅವರೊಂದಿಗೆ ಆಡಿದ್ದರು.
1997ರಲ್ಲಿ ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್ ಗೋಲ್ಡ್ ಕಪ್‍ನ್ನು ಜಯಿಸಿದ್ದರು. ಟಾಟಾ ಫುಟ್ಬಾಲ್ ಅಕಾಡಮಿಯಲ್ಲಿ ಪಳಗಿರುವ ಚಾಪ್ಮನ್ 1993ರಲ್ಲಿ ಈಸ್ಟ್ ಬಂಗಾಳ ತಂಡವನ್ನು ಸೇರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel