ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ : ಸಿದ್ದರಾಮಯ್ಯ ಕಂಬನಿ

1 min read
Siddaramaiah Saaksha Tv

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ : ಸಿದ್ದರಾಮಯ್ಯ ಕಂಬನಿ

ಚಿಕ್ಕಬಳ್ಳಾಪುರಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಅವರ ಅಗಲಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  ಸಿಪಿಎಂ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ‌ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.  ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ರೆಡ್ಡಿಯವರು ಇತ್ತೀಚಿನ ವರ್ಷಗಳಲ್ಲಿ‌ ಕೋಮುವಾದದ ವಿರುದ್ದದ ಗಟ್ಟಿದನಿಯಾಗಿದ್ದರು.

Former MLA GV Sriramareddy dies Siddaramaiah condolences saaksha tv

ಇತ್ತೀಚೆಗೆ ಜಾತ್ಯತೀತ ಶಕ್ತಿಗಳ ಸಂಘಟನೆಗೆ ಪ್ರಯತ್ನ ನಡೆಸುತ್ತಿದ್ದ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ರಾಜ್ಯ ಒಬ್ಬ ಧೀಮಂತ ಹೋರಾಟಗಾರನನ್ನು ಮತ್ತು ವೈಯಕ್ತಿಕವಾಗಿ ನಾನು ಬಹುಕಾಲದ ಗೆಳೆಯನನ್ನು ಕಳೆದುಕೊಂಡಿದ್ದೇನೆ.  ಅವರ ಕುಟುಂಬದ ಸದಸ್ಯರ‌ ಮತ್ತು ಅನುಯಾಯಿಗಳ‌ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

Former MLA GV Sriramareddy dies Siddaramaiah condolences

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd