k-kempegowda | ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ
ಮಂಡ್ಯ : ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಇಂದು ಬೆಳಗಿನ ಜಾವ ತಮ್ಮ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಂಪೇಗೌಡ ಅವರು ಪಾಂಡವಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು.

ಮೊದಲು 1983ರಲ್ಲಿ ಜನತಾಪರಿವಾರದಿಂದ ಗೆಲುವು ಸಾಧಿಸಿದ್ದ ಅವರು, 1985 ರಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಬಳಿಕ 1999 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಜಯ ಸಾಧಿಸಿದ್ದರು.
ಇಂದು ಮಧ್ಯಾಹ್ನ ಮೂರು ಗಂಟೆಗೆ ಚಿನಕುರಳಿ ತೋಟದಲ್ಲಿಯೇ ಕೆ.ಕೆಂಪೇಗೌಡ ಅವರ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ತಿರ್ಮಾನಿಸಿದ್ದಾರೆ.