ಫ್ರೆಂಚ್ ಹಿಮನದಿಯ ಕರಗುವಿಕೆಯಲ್ಲಿ ಪತ್ತೆಯಾಗಿದೆ 1966 ರ ಭಾರತೀಯ ಪತ್ರಿಕೆಗಳು !
ಹೊಸದಿಲ್ಲಿ, ಜುಲೈ 14: ಮಾಂಟ್ ಬ್ಲಾಂಕ್ ಪರ್ವತ ಶ್ರೇಣಿಯಲ್ಲಿರುವ ಬಾಸ್ಸನ್ಗಳ ಕರಗುವ ಫ್ರೆಂಚ್ ಹಿಮನದಿ ಕರಗುತ್ತಾ ಸಾಗಿದಂತೆ ಹಲವು ದಶಕಗಳ ಹಿಂದೆ ಹೂತುಹೋಗಿದ್ದ ರಹಸ್ಯಗಳಿಗೂ ಉತ್ತರ ದೊರಕಲು ಸಿಗಲಾರಂಭಿಸಿದೆ.
1966 ರಲ್ಲಿ ಇಂದಿರಾ ಗಾಂಧಿಯವರ ಚುನಾವಣಾ ಗೆಲುವನ್ನು ಉಲ್ಲೇಖಿಸುವ “ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ” ಮುಂತಾದ ಮುಖ್ಯಾಂಶಗಳೊಂದಿಗೆ ಭಾರತೀಯ ಪತ್ರಿಕೆ ಪ್ರತಿಗಳು, ಪಶ್ಚಿಮ ಯುರೋಪಿನ ಮಾಂಟ್ ಬ್ಲಾಂಕ್ ಪರ್ವತ ಶ್ರೇಣಿಯಲ್ಲಿರುವ ಬಾಸ್ಸನ್ಗಳ ಕರಗುವ ಫ್ರೆಂಚ್ ಹಿಮನದಿ, ಬಳಿ ಪತ್ತೆಯಾಗಿದೆ.
ಪತ್ರಿಕೆಗಳು ಜನವರಿ 24, 1966 ರಂದು ಯುರೋಪಿನ ಅತಿ ಎತ್ತರದ ಪರ್ವತಕ್ಕೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನದ ಅವಶೇಷಗಳಿಗೆ ಸೇರಿದ್ದು ಎಂದು ಅಂದಾಜಿಸಲಾಗಿದ್ದು, ಫ್ರೆಂಚ್ ರೆಸಾರ್ಟ್ನಿಂದ 1,350 ಮೀಟರ್ ಎತ್ತರದಲ್ಲಿ ಕೆಫೆ-ರೆಸ್ಟೋರೆಂಟ್ ಲಾ ಕ್ಯಾಬಾನೆ ಡು ಸೆರೊವನ್ನು ನಡೆಸುತ್ತಿರುವ ತಿಮೋತಿ ಮೊಟಿನ್ ಅವರು ಇದನ್ನು ಪತ್ತೆ ಹಚ್ಚಿದ್ದಾರೆ.
1966ರ ಜನವರಿ 24 ರಂದು 177 ಮಂದಿಯನ್ನು ಹೊತ್ತು ಕೊಂಡು ಮುಂಬೈನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 707 ವಿಮಾನವು ಮಾಂಟ್ ಬ್ಲಾಂಕ್ ಪರ್ವತ ಶ್ರೇಣಿಗೆ ಡಿಕ್ಕಿ ಹೊಡೆದು ಎಲ್ಲಾ 177 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದರು. ಭಾರತೀಯ ಪರಮಾಣು ಶಕ್ತಿ ಅಯೋಗದ ಅಧ್ಯಕ್ಷ ಡಾ| ಹೋಮಿ ಜಹಾಂಗೀರ್ ಭಾಭಾ ಕೂಡ ಇದೇ ದುರಂತದಲ್ಲಿ ಮೃತಪಟ್ಟಿದ್ದರು.
ಹಿಮನದಿಯಲ್ಲಿ ಸಿಕ್ಕಿರುವ ಬಹುತೇಕ ಅವಶೇಷಗಳನ್ನು ತನ್ನ ಕೆಫೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ತಿಮೋತಿ ಮೊಟಿನ್ ಈಗ ಈ ಪ್ರತಿಕೆಗಳ ಕಟ್ಟು ಸಹ ನನ್ನ ಅಮೂಲ್ಯ ಸಂಗ್ರಹ ಸೇರುತ್ತದೆ ಎಂದು ಹೇಳಿದ್ದಾರೆ.