ಹಿರಿಯೂರು ರಾಷ್ಟ್ರೀಯ ಹೆದ್ದಾರಿ ಬಳಿ ಸರಣಿ ಅಪಘಾತ 4 ಸಾವು
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೊಕಿನ ಆಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ಕ್ಯಾಂಟರ್ ಮತ್ತು ಕಾರಿನ ನಡುವೆ ಸರಣಿ ಅಪಘತ ನಡೆದು 4 ಜನ ಸಾವನ್ನಪಿರುವ ಘಟನೆ ನಡೆದಿದೆ.
ಈರುಳ್ಳಿ ಸಾಗಿಸುತ್ತಿದ್ದ ಲಾರಿ ಟೈಯರ್ ಸ್ಪೋಟಗೊಂಡು ಪಲ್ಟಿಯಾಗಿದೆ. ಹಿಂದೆ ಬರುತ್ತಿದ್ದ ಕ್ಯಾಂಟರ್ ಸಹ ಡಿಕ್ಕಿ ಹೊಡೆದಿದೆ ಅಲ್ಲದೆ ಹಿಂಬದಿಯಿಂದ ಕಾರು ಸಹ ಅಪಘಾತಕ್ಕೆ ಒಳಗಾಗಿದೆ. ಬೆಳಗಿನ ಜಾವ 5 ಗಂಟೆಗೆ ಅಪಘಾತ ನಡೆದಿದೆ.
ಘಟನೆಯಲ್ಲಿ ಗದಗ ಜಿಲ್ಲೆ ಹುಯಿಲಗೊಳ ಗ್ರಾಮದ ಹನುಮಪ್ಪ ಕಳಕಪ್ಪ ಹುನಗುಂದಿ, ಗುರಪ್ಪಾ ಹುಗಾರ್, ರಮೇಶ್ ಪ್ರಶಾಂತ್ ಹಟ್ಟಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಹಿರಿಯೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಚಿತ್ರದುರ್ಗಎಸ್ ಪಿ ಜಿ ರಾಧಿಕ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಪಲ್ಟಿ ಹೊಡೆದದ್ದರಿಂದ ಲಕ್ಷಾಂತರ ರುಪಾಯಿ ಮೌಲ್ಯದ ಈರುಳ್ಳಿ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ನಾಶವಾಗಿದೆ. ಕ್ರೇನ್ ಮೂಲಕ ವಾಹನಗಳನ್ನ ಬದಿಗೆ ಸರಿಸಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.