ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಅಬಯಾ ಉಡುಗೆಯನ್ನು ಫ್ರಾನ್ಸ್ ಸರ್ಕಾರ ನಿಷೇಧಿಸಲು ಮುಂದಾಗಿದೆ. ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹೊಂದಿದ ಬಟ್ಟೆಯನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಲು ಮುಂದಾಗಲಾಗಿದೆ.
ಸಡಿಲವಾದ, ಪೂರ್ಣ-ಉದ್ದದ ನಿಲುವಂಗಿಯನ್ನು ಧರಿಸುವುದನ್ನು ಫ್ರಾನ್ಸ್ ನಿಷೇಧಿಸುತ್ತದೆ ಎಂದು ಅಲ್ಲಿನ ಶಿಕ್ಷಣ ಸಚಿವರು ಹೇಳಿದ್ದಾರೆ. ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು ಅವಕಾಶವಿರುವುದಿಲ್ಲ. ಸೆಪ್ಟೆಂಬರ್ ನಾಲ್ಕರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಸ್ಪಷ್ಟ ನಿಯಮಗಳನ್ನು ತರುವುದಾಗಿ ಅಲ್ಲಿನ ಸರ್ಕಾರ ಮುಂದಾಗಿದೆ.
ಫ್ರೆಂಚ್ ಶಾಲೆಗಳಲ್ಲಿ ಅಬಯಾಗಳನ್ನು ಧರಿಸುವ ಕುರಿತು ಹಲವು ತಿಂಗಳಿನಿಂದ ಚರ್ಚೆ ನಡೆದಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವದನ್ನು ಧೀರ್ಘಕಾಲದಿಂದ ಫ್ರೆಂಚ್ ಶಾಲೆಗಳಲ್ಲಿ ನಿಷೇಧಿಸಲಾಗಿದೆ. ಯಾವುದೇ ಶಾಲೆಗೆ ವಿದ್ಯಾರ್ಥಿ ತರಗತಿಗೆ ಕಾಲಿಟ್ಟಾಗ ಅವರ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು. ಶಾಲೆಗಳಲ್ಲಿ ಎಲ್ಲ ಮಕ್ಕಳು ಒಂದೇ ಒಂದೇ ರೀತಿಯ ಸಮ ಎನ್ನುವ ರೀತಿ ಇರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ.