France captain Hugo Lloris retires : ಫ್ರಾನ್ಸ್ ತಂಡದ ನಾಯಕ ಹ್ಯೂಗೋ ಲೊರಿಸ್ ನಿವೃತ್ತಿ
ಫ್ರಾನ್ಸ್ ಫುಟ್ಬಾಲ್ ತಂಡದ ನಾಯಕ ಹ್ಯೂಗೋ ಲೊರಿಸ್ ಸೋಮವಾರ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಲೋರಿಸ್ 16 ವರ್ಷಗಳ ಕಾಲ ಫ್ರೆಂಚ್ ತಂಡದ ಬಾಗವಾಗಿದ್ದರು. ಅವರು 2018 ರಲ್ಲಿ ವಿಶ್ವಕಪ್ ಮತ್ತು 2020-21 ರಲ್ಲಿ ನೇಷನ್ಸ್ ಲೀಗ್ ಅನ್ನು ಗೆದ್ದ ತಂಡದ ಸದಸ್ಯರೂ ಹೌದು.
ಲೊರಿಸ್ ತನ್ನ 21 ನೇ ವಯಸ್ಸಿನಲ್ಲಿ ಉರುಗ್ವೆ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ನವೆಂಬರ್ 2008 ರಲ್ಲಿ ತನ್ನ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು.ವಿಶ್ವಕಪ್ನಲ್ಲಿ ಫ್ರಾನ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅವರು ಲಿಲಿಯನ್ ಥುರಾಮ್ ಅವರ 142 ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಿದರು. ಲೊರಿಸ್ ಕಳೆದ FIFA ವಿಶ್ವಕಪ್ ಫೈನಲ್ನಲ್ಲಿ ಕಾಣಿಸಿಕೊಂಡ ನಂತರ ಫ್ರಾನ್ಸ್ಗಾಗಿ ತನ್ನ 145 ನೇ ಪಂದ್ಯದಲ್ಲಿ ಆಡಿದರು.
ಸತತ ಎರಡು ವಿಶ್ವಕಪ್ ಫೈನಲ್ಗಳನ್ನು ಆಡಿದ ನಾಲ್ಕನೇ ನಾಯಕ
ಲೋರಿಸ್ ಸತತ ಎರಡನೇ ಬಾರಿಗೆ ಫ್ರಾನ್ಸ್ ಅನ್ನು ಫೈನಲ್ಗೆ ಕರೆದೊಯ್ದರು. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ನಾಯಕ. ಲೋರಿಸ್ ನಾಯಕತ್ವದಲ್ಲಿ, ಫ್ರಾನ್ಸ್ 2018 ರ ವಿಶ್ವಕಪ್ನಲ್ಲಿ ವಿಜೇತರಾಗಿದ್ದರೆ, 2022 ರ ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿತ್ತು.
ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ನಲ್ಲಿ ಲೊರಿಸ್ ನಾಯಕತ್ವದಲ್ಲಿ ಫ್ರೆಂಚ್ ತಂಡ ಫೈನಲ್ ತಲುಪಿತ್ತು. ಆದರೆ ಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಅರ್ಜೆಂಟೀನಾ ವಿರುದ್ಧ ಸೋತಿತು. ಈ ಪಂದ್ಯದಲ್ಲಿ ಹೆಚ್ಚುವರಿ ಸಮಯದವರೆಗೆ ಉಭಯ ತಂಡಗಳು 3-3 ಗೋಲು ಗಳಿಸಿದವು.
ಪೆನಾಲ್ಟಿ ಶೂಟೌಟ್ನಲ್ಲಿ ಅರ್ಜೆಂಟೀನಾ 4 ಗೋಲು ಗಳಿಸಲು ಯಶಸ್ವಿಯಾದರೆ, ಫ್ರಾನ್ಸ್ ತಂಡ ಕೇವಲ 2 ಗೋಲು ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಫ್ರಾನ್ಸ್ 2-4 ಅಂತರದಲ್ಲಿ ಸೋಲನುಭವಿಸಬೇಕಾಯಿತು.
France captain Hugo Lloris retires
France. captain, Hugo Lloris, retires, FOOTBALL








