ಬೆಂಗಳೂರು: ವ್ಯಕ್ತಿಯೊಬ್ಬ ಮಹಿಳೆಗೆ ಲಕ್ಷ ಲಕ್ಷ ರೂ. ವಂಚಿಸಿರುವ ಘಟನೆಯೊಂದು ನಡೆದಿದೆ.
ಈ ಕುರಿತು ಫಾತಿಮಾ ಎಂಬುವವರು ಹಜರತ್ ನೂರ್ ಮೊಹಮ್ಮದ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯು ಫಾತಿಮಾ ಅವರಿಗೆ ಬಿಟ್ಟು ಹೋದ ಪತಿಯನ್ನು ಮರಳಿ ಕೂಡಿಸುವುದಾಗಿ ಹೇಳಿ ಅವರ ಹೆಸರಿನಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ವಂಚಿಸಿದ್ದಾನೆ ಎನ್ನಲಾಗಿದೆ.
ನೀರಾವರಿ ಇಲಾಖೆಯಲ್ಲಿ ಎಫ್‍ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಫಾತಿಮಾ ಪತಿ ಬಿಟ್ಟು ಹೋಗಿದ್ದರು. ಮೂರು ವರ್ಷದ ಮಗುವಿನ ಕೈಗೆ ಗಾಯ ಆಗಮಿತ್ತು. ಪಕ್ಕದವರ ಮಾತು ಕೇಳಿ ಹಜರತ್ ನೂರ್ ಸಂಪರ್ಕ ಮಾಡಿ ಔಷಧಿ ಪಡೆದಿದ್ದರು.
ಕಾಕತಾಳಿಯ ಎಂಬಂತೆ ಮಗುವಿಗೆ ಕೈ ಒಂದು ವಾರದಲ್ಲಿ ಸರಿಹೋಗಿತ್ತು. ಹೀಗಾಗಿ ಹಜರತ್ ನನ್ನ ಸಂಪೂರ್ಣ ನಂಬಿದ್ದ ಫಾತಿಮಾ, ಪತಿ ತನ್ನ ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದಳು. ಆಗ ನೂರ್ ಒಂದು ಲಕ್ಷ ಹಣ ಪಡೆದಿದ್ದ. ಆ ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಏಳು ಲಕ್ಷ ಪಡೆದಿದ್ದಾನೆ. ಆನಂತರ ನಾಪತ್ತೆಯಾಗಿದ್ದಾನೆ. ಈ ಕುರಿತು ದೂರು ದಾಖಲಾಗಿದ್ದು, ಆರೋಪಿಯನ್ನು ಶಿರಾ ಪೊಲೀಸರು ವಂಚಿಸಿದ್ದಾರೆ.