ಕೋವಿಡ್ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಫ್ರೀ..!
ಹರಿಯಾಣ : ಕೊರೊನಾ 2ನೇ ಅಲೆ ದೇಶಾದ್ಯಂತ ರಣಕೇಕೆಯಾಗ್ತಿದ್ದು, ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಅಭಿಯಾನ ಜಾರಿಯಲ್ಲಿದೆ. ಹೀಗಿರುವಾಗ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ನಾನಾ ಕಡೆ ಲಸಿಕೆ ಪಡೆಯಲು ಜನರನ್ನ ಪ್ರೋತ್ಸಾಹಿಸಲು ಕೆಲ ಟೆಕ್ನಿಕ್ ಗಳನ್ನ ಬಳಸಿಕೊಳ್ಳಲಾಗ್ತಿದೆ.
ಈ ನಡುವೆ ಹರಿಯಾಣದ ಗುರುಗ್ರಾಮದಲ್ಲಿ ‘ಇಂಡಿಯನ್ ಗ್ರಿಲ್ ರೂಮ್’ ಒಂದು ಅಭಿಯಾನವನ್ನು ಶುರು ಮಾಡಿದೆ. ‘ಸೆಲೆಬ್ರೇಟ್ ಯುವರ್ ವ್ಯಾಕ್ಸಿನೇಷನ್ ವಿತ್ ಗ್ರಿಲ್ ರೂಮ್’ ಎಂದು ಈ ಅಭಿಯಾನಕ್ಕೆ ಹೆಸರಿಟ್ಟಿದೆ. ಕೋವಿಡ್ ಲಸಿಕೆ ಪಡೆಯುವವರನ್ನು ಹೆಚ್ಚಿಸಲು ಈ ಅಭಿಯಾನ ಶುರುಮಾಡಿರುವ ಗ್ರಿಲ್ ರೂಮ್ ನಲ್ಲಿ ನೀವು ಲಸಿಕೆ ಹಾಕಿಸಿಕೊಂಡಿರುವ ಕಾರ್ಡ್ ತೋರಿಸಿದ್ರೆ ಉಚಿತವಾಗಿ ಬೀಯರ್ ಅನ್ನು ಕೊಡಲಾಗುತ್ತದೆಯಂತೆ. ಈ ಅಭಿಯಾನ ಏಪ್ರಿಲ್ 5 ರಿಂದ ಶುರುವಾಗಿದ್ದು, ಒಂದು ವಾರದ ವರೆಗೆ ಉಚಿತ ಬೀಯರ್ ನೀಡಲಾಗುತ್ತದೆ.
18 ವರ್ಷ ಮೇಲ್ಪಟ್ಟವರು ಯಾವುದೇ ಧರ್ಮವನ್ನ ಆಯ್ದುಕೊಳ್ಳಲು ಸ್ವತಂತ್ರರು – ಸುಪ್ರೀಂ ಕೋರ್ಟ್..!