18 ವರ್ಷ ಮೇಲ್ಪಟ್ಟವರು ಯಾವುದೇ ಧರ್ಮವನ್ನ ಆಯ್ದುಕೊಳ್ಳಲು ಸ್ವತಂತ್ರರು – ಸುಪ್ರೀಂ ಕೋರ್ಟ್..!
ನವದೆಹಲಿ : ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಕೊರ್ಟ್ ವಜಾಗೊಳಿಸಿದೆ. 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆರಿಸಲು ಸ್ವತಂತ್ರರು ಎಂದು ಹೇಳಿದೆ.
ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣ ಅವರ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ತಿರಸ್ಕರಿಸಿರುವ ನ್ಯಾಯಾಲಯವು 18 ವರ್ಷ ಮೇಲ್ಪಟ್ಟ ಯಾರಿಗೇ ಆದರೂ ತನ್ನ ಧರ್ಮ ಆಯ್ಕೆ ಮಾಡುವ ಸ್ವತಂತ್ರವಿದೆ. ಅದನ್ನ ತಡೆಯುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಬಿ ಆರ್ ಗವಾಯಿ ಹಾಗೂ ಹೃಷಿಕೇಶ್ ರಾಯ್ ಅವರ ಪೀಠ ಅರ್ಜಿ ತಿರಸ್ಕರಿಸಿದೆ.
ನಾಳೆಯಿಂದ ನೈಟ್ ಕರ್ಫ್ಯೂ : ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಬ್ರಿಟನ್ ರಾಣಿ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ನಿಧನ
ಮೊಬೈಲ್ ಕದ್ದು ಓಡಿ ಹೋದ ಕಳ್ಳ… ಮತ್ತೆ ಬಂದು ಮೊಬೈಲ್ ಕೊಟ್ಟ..! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!








