Free Coaching for SSLC Exam Preparation Students-ಬೆಂಗಳೂರು: ಕೆಲವೇ ತಿಂಗಳುಗಳಲ್ಲಿ 2022-23 ನೇ ಸಾಲಿನ SSLC ಪರೀಕ್ಷೆ ಆರಂಭವಾಗುತ್ತಿದ್ದು ಪರೀಕ್ಷೆಗೆ ತಯಾರಿಗಳು ರಭಸದಿಂದ ಸಾಗಿವೆ. ಉತ್ತಮ ಅಂಕ ಪಡೆಯುವುದಕ್ಕಾಗಿ ಶಾಲೆಗಳಲ್ಲಂತೂ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿದೆ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ದಸರಾ ನಂತರ ಪಠ್ಯದಲ್ಲಿ ಹೆಚ್ಚು ತೊಡಗುವಂತೆ ಪ್ರೇರೇಪಿಸಲಾಗುತ್ತಿದೆ. ಈ ಮಧ್ಯೆ ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ತರಬೇತಿಗಾಗಿ ಖಾಸಗಿ ಕೋಚಿಂಗ್ ಅಥವಾ ಟ್ಯೂಶನ್ ಕ್ಲಾಸ್ಗಳಿಗೆ (SSCL Coaching) ಗಳತ್ತ ಮುಖಮಾಡಿದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ಆದರೆ ಬಡವರ್ಗದ ಮಕ್ಕಳಿಗಾಗಿ ಇದ್ಯಾವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ ಬೆಂಗಳೂರು ನಗರ (Bengaluru News) ವ್ಯಾಪ್ತಿಯಲ್ಲಿ ಮಕ್ಕಳಿಗಾಗಿ ಉಚಿತ ಕೋಚಿಂಗ್ ನೀಡಲು (SSLC Free Coaching In Bengaluru) ಸರಕಾರೇತರ ಸಂಸ್ಥೆಯೊಂದು ಸಿದ್ಧವಾಗಿದೆ. ‘ಜ್ಞಾನಯಜ್ಞ’ ಎಂಬ ಹೆಸರಿನಡಿಯಲ್ಲಿ ಕಬೀರ್ ಟ್ರಸ್ಟ್ ವತಿಯಿಂದ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.
‘ಜ್ಞಾನಯಜ್ಞ’ ಯೋಜನೆಯಡಿ ಕಬೀರ್ ಟ್ರಸ್ಟ್ ವತಿಯಿಂದ 100 ದಿನಗಳ ಉಚಿತ SSLC ಕೋಚಿಂಗ್ ಇದಾಗಿದ್ದು
ಈ ತರಬೇತಿಯು ಬೆಂಗಳೂರಿನ ಜೆಸಿ ನಗರ ಸಮೀಪದ ಮೋತಿ ನಗರದಲ್ಲಿರುವ ಕಬೀರ್ ಆಶ್ರಮದಲ್ಲಿ ಸಾಯಂಕಾಲ 6.30 ಗಂಟೆಗೆ ಆರಂಭವಾಗಲಿದೆ.
ಅಕ್ಟೋಬರ್ 30 ರಿಂದ ಉಚಿತ ಕೋಚಿಂಗ್ ತರಬೇತಿ ಆರಂಭವಾಗಿ ನೂರು ದಿನಗಳ ಕಾಲ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಐಟೆಕ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ‌್ಸ್, ಕಬೀರ್ ಆಶ್ರಮ ಇಲ್ಲಿಂದ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.