ಲಾಕ್ ಡೌನ್ ಮುಗಿಯುವವರೆಗೂ ‘ಗೆಳೆಯರ ಬಳಗ’ದಿಂದ ಉಚಿತ ಆಹಾರ ವಿತರಣೆ Bellary
ಬಳ್ಳಾರಿ : ಕೊರೊನಾ ಎರಡನೇ ಅಲೆ ಎಷ್ಟೋ ಮಂದಿಯನ್ನ ಬೀದಿಗೆ ತಂದಿದೆ. ಲಕ್ಷಾಂತರ ಮಂದಿ ಒಂದೊತ್ತು ಊಟಕ್ಕೂ ಪರದಾಡುತಂಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ಬಳ್ಳಾರಿಯ ಗೆಳೆಯರ ಬಳಗದ ನೇತೃತ್ವದಲ್ಲಿ ಬಡ ಜನರಿಗೆ, ರೋಗಿಯ ಸಹಾಯಕರಿಗೆ ಉಚಿತ ಊಟ, ನೀರು ಮತ್ತು ಹಣ್ಣು ವಿತರಣೆ ಮಾಡಲಾಯಿತು.
ಲಾಕ್ ಡೌನ್ ಮುಗಿಯುವವರೆಗೆ ನಗರದ ವಿಮ್ಸ್ ಆವರಣದಲ್ಲಿರುವ ಹಸಿದವರಿಗೆ ಮಧ್ಯಾಹ್ನದ ಊಟ, ಹಣ್ಣುಗಳನ್ನು ಸ್ನೇಹಿತರ ಸಹಕಾರದೊಂದಿಗೆ ವಿತರಿಸಲಾಗುತ್ತದೆ.
ಈ ಹಿಂದೆ ಇದೇ ಒಪಿಡಿ ಆವರಣದಲ್ಲಿ 13 ದಿನಗಳ ಕಾಲ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ 500 ಜನರಿಗೆ ಪ್ರತಿದಿನ ಊಟ, ಹಣ್ಣು ವಿತರಣೆ ಮಾಡಿದ್ದರು.
ಅದೇ ರೀತಿ ಈ ಬಾರಿ ಕೂಡ ಗೆಳೆಯರ ಬಳಗದ ಸ್ನೇಹಿತರಾದ ಓಂ ಪ್ರಕಾಶ್, ಗೋವಿಂದರೆಡ್ಡಿ, ಅಜಯ್, ನಾಗರಾಜ್, ಹಿತೇಶ್, ಸಾಯಿ, ರಾಜು, ರುದ್ರ, ರಾಮು ಮತ್ತು ಧನಶೇಖರ್ ಹಸಿದವರಿಗೆ ಊಟ ನೀಡುವ ಪುಣ್ಯದ ಕೆಲಸ ಹಮ್ಮಿಕೊಂಡಿದ್ದಾರೆ.










