ಕೋಲಾರದ ಕ್ಯಾಸಂಬಳ್ಳಿಯಲ್ಲಿ ರಾಜ್ಯದ ಮೊದಲ ಸಿಎಂ ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣ
ಕೋಲಾರ : ಸ್ವಾತಂತ್ರ್ಯ ಹೋರಾಟಗಾರ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಹುಟ್ಟೂರು ಕೋಲಾರದ ಕ್ಯಾಸಂಬಳ್ಳಿಯಲ್ಲಿ ಅವರ ಸ್ಮಾರಕ ಸಂಕೀರ್ಣ ನಿರ್ಮಾಣವಾಗಲಿದೆ. ಕ್ಯಾಸಂಬಳ್ಳಿ ಹೋಬಳಿಯ ರಾಮಪುರ ಗ್ರಾಮದ ಕೆರೆ ಬಳಿ 2 ಎಕರೆ ಗೋಮಾಳ ಜಾಗವನ್ನು ಸ್ಮಾರಕ ಸಂಕೀರ್ಣ ನಿರ್ಮಿಸಲು ಗುರ್ತಿಸಲಾಗಿದೆ. ಈ ಸ್ಥಳಕ್ಕೆ ಇಂದು ಕೆಜಿಎಫ್ ಶಾಸಕಿ ರೂಪಕಲಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಪಕ್ಕದಲ್ಲೆ ನೂರಾರು ಎಕರೆಯ ಕೆರೆಯಿದ್ದು ಸುಂದರ ಉದ್ಯಾನವನ ನಿರ್ಮಾಣವಾದರೆ, ಉತ್ತಮ ಹಿನ್ನೋಟವು ಕಾಣಸಿಗಲಿದೆ, ಸ್ಮಾರಕ ಸಂಕಿರಣದಲ್ಲಿ ಕೆಸಿ ರೆಡ್ಡಿ ಅವರ ಪುತ್ತಳಿ, ಅವರ ಕುರಿತಾದ ಸಂಪೂರ್ಣ ಮಾಹಿತಿ ಫಲಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಂಕೀರ್ಣ ಸ್ಥಳವನ್ನ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಇಲಾಖೆಯು ಹಲವು ಯೋಜನೆಯನ್ನ ಹಮ್ಮಿಕೊಂಡಿದೆ.








