ಪಾರ್ಟಿ ನೀಡಲ್ಲ ಎಂದ ವರ : ಗೆಳೆಯರು ಕೊಟ್ಟ ಶಿಕ್ಷೆ ಅತ್ಯಂತ ಕಠೋರ..!
ಉತ್ತರಪ್ರದೇಶ: ಮದುವೆಯಾದ ಮೇಲೆ ಗೆಳೆಯರು ಪಾರ್ಟಿ ಕೇಳೋದು , ಮಧುಮಗ, ಮಧುಮಗಳು ಪಾರ್ಟಿ ಕೊಡಿಸೋದೆಲ್ಲಾ ಕಾಮನ್.. ಆದ್ರೆ ಇಲ್ಲೊಬ್ಬ ವರ ಗೆಳೆಯರಿಗೆ ಪಾರ್ಟಿ ಕೊಡಿಸಲ್ಲಾ ಎಂದಿದ್ದಾನೆ. ಪ್ರತಿಫಲವಾಗಿ ಆತನ ಪ್ರಾಣವನ್ನೇ ತೆಗೆದುಬಿಟ್ಟಿದ್ದಾರೆ ಗೆಳೆಯರು. ಹೌದು ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಪಾಲಿಮುಕಿಮ್ಪುರ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಮದುವೆಯಾಗಿದ್ದಕ್ಕೆ ಪಾರ್ಟಿ ನೀಡಲಿಲ್ಲವೆಂದು ನವವಿವಾಹಿತನ ಜೀವವನ್ನೇ ತೆಗೆದಿದ್ದಾರೆ.
‘ಮಾಸ್ಕ್ ಬೇಡ’ ವೆಂದ ಮೋದಿ : ವಿಡಿಯೋ ಸಖತ್ ಟ್ರೋಲ್
ಅಂದ್ಹಾಗೆ ಮೃತನಿಗೆ ಇತ್ತೀಚೆಗೆ 2ನೇ ವಿವಾಹವಾಗಿತ್ತು. ಮದುವೆಯಾದ ಬಳಿಕ ಸ್ನೇಹಿತರ ಮನೆಗೆ ಹೋಗಿದ್ದಾನೆ. ಈ ವೇಳೆ ಸ್ನೇಹಿತರು ಪಾರ್ಟಿ ಕೊಡಿಸೋಕೆ ಹೇಳಿದ್ದಾರೆ. ಆದರೆ ಆತ ಪಾರ್ಟಿ ಕೊಡೋಕೆ ನಿರಾಕರಿಸಿದ್ದಾನೆ. ಇದರಿಂದ ಸ್ನೇಹಿತರ ನಡುವೆ ಜಗಳ ನಡೆದಿದೆ. ಗಲಾಟೆ ತೀವ್ರ ಸ್ವರೂಪ ಪಡೆದು ಆತನ ಸಾವಿನಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ನವವಿಹಾಹಿತನ ಕತ್ತು ಸೀಳಿ ಸ್ನೇಹಿತರೇ ಕೊಲೆ ಮಾಡಿದ್ದಾರೆ. ಸ್ನೇಹಿತರು ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
`ಪ್ರಶಾಂತ್ ನೀಲ್ ಕಥೆ’ಯಲ್ಲಿ `ಬಘೀರನಾದ ಶ್ರೀಮುರಳಿ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








