ಫ್ರೆಂಚ್ ಓಪನ್ 2021- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಯುವ ಆಟಗಾರ್ತಿ ಗೌಫ್…!

1 min read
coco gauff french open saakshatv

ಫ್ರೆಂಚ್ ಓಪನ್ 2021- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಯುವ ಆಟಗಾರ್ತಿ ಗೌಫ್…!

maria sakkkari french open saakshatvಅಮೆರಿಕಾದ ಯುವ ಆಟಗಾರ್ತಿ ಕೊಕೊ ಗೌಫ್ ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಚೊಚ್ಚಲ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಗೌಫ್ ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6-3, 6-1ರಿಂದ ಒನಾಸ್ ಜಾಬೆರ್ ಅವರನ್ನು ಪರಾಭವಗೊಳಿಸಿದ್ರು.

ಕ್ವಾರ್ಟರ್ ಫೈನಲ್ ನಲ್ಲಿ ಕೊಕೊ ಗೌಫ್ ಅವರು ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಸಿಕೊವಾ ಅವರನ್ನು ಎದುರಿಸಲಿದ್ದಾರೆ.

barbora french open saakshatvಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತೆ ಅಮೆರಿಕಾದ ಸೋಫಿಯಾ ಕೆನಿನ್ ಅವರು ಆಘಾತ ಅನುಭವಿಸಿದ್ದಾರೆ.

ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೋಫಿಯಾ ಕೆನಿನ್ 1-6, 3-6ರಿಂದ ಗ್ರೀಕ್ ನ ಮರಿಯಾ ಸಕಾರಿ ಅವರಿಗೆ ತಲೆಬಾಗಿದ್ರು.

ಇನ್ನು ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಸಿಕೊವಾ 6-2, 6-0 ಯಿಂದ ಅಮೆರಿಕಾದ ಸ್ಲೊಯಾನ್ ಸ್ಟೇಫೆನ್ಸ್ ಅವರನ್ನು ಮಣಿಸಿದ್ರು.

ಒಟ್ಟಿನಲ್ಲಿ ಈ ಬಾರಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಶ್ರೇಯಾಂಕಿತ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಯುವ ಆಟಗಾರ್ತಿಯರು ಆವೆ ಮಣ್ಣಿನ ಅಂಗಣದಲ್ಲಿ ಪ್ರಶಸ್ತಿ ಗೆಲ್ಲಲು ಹೋರಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd