ಫ್ರೆಂಚ್ ಓಪನ್ – ಹಾಲಿ ಚಾಂಪಿಯನ್ ಐಗಾ ಸ್ವಿಟೆಕ್ ಗೆ ಆಘಾತ ನೀಡಿದ ಮರಿಯಾ ಸಕಾರಿ..!

1 min read
mariya sakkari french open saakshatv

ಫ್ರೆಂಚ್ ಓಪನ್ – ಹಾಲಿ ಚಾಂಪಿಯನ್ ಐಗಾ ಸ್ವಿಟೆಕ್ ಗೆ ಆಘಾತ ನೀಡಿದ ಮರಿಯಾ ಸಕಾರಿ..!

mariya sakkari french open saakshatvಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಟಗಾರ್ತಿಯರು ಟೂರ್ನಿಯಿಂದ ಒಬ್ಬೊಬ್ಬರಾಗಿಯೇ ಹೊರ ನಡೆಯುತ್ತಿದ್ದಾರೆ.
ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಐಗಾ ಸ್ವಿಟೆಕ್ ಅವರು ನಿರಾಸೆ ಅನುಭವಿಸಿದ್ದಾರೆ.
ಎಂಟರ ಘಟ್ಟದಲ್ಲಿ ಗ್ರೀನ್ ಮರಿಯ ಸಕಾರಿ ಅವರು 6-4, 6-4ರಿಂದ ಐಗಾ ಸ್ವಿಟೆಕ್ ಅವರನ್ನು ಮಣಿಸಿದ್ರು.
ಮಹಿಳೆಯರ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಬಾರ್ಬೊರ ಕ್ರೆಝಿಕೊವಾ ಅವರು ಸೆಮೀಸ್ ಗೆ ಎಂಟ್ರಿಯಾಗಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾರ್ಬೊರ ಕ್ರೆಝಿಕೊವಾ 7-6, 6-3ರಿಂದ ಅಮೆರಿಕಾದ ಕೊಕೊ ಗೌಫ್ ಅವರನ್ನು ಮಣಿಸಿದ್ರು. ಟೂರ್ನಿಯ ಯುವ ಆಟಗಾರ್ತಿಯಾಗಿರುವ ಕೊಕೊ ಗೌಫ್ ಅವರು ಗೆಲುವಿನ Barbora Krejcikova saakshatv frecnh open ಓಟವನ್ನು ಮುಂದುವರಿಸಲು ಬಾರ್ಬೊರ ಅವರು ಅವಕಾಶವನ್ನೇ ನೀಡಲಿಲ್ಲ.
ಸೆಮಿಫೈನಲ್ ಪಂದ್ಯದಲ್ಲಿ 18ನೇ ಶ್ರೇಯಾಂಕಿತೆ ಮರಿಯ ಸಕಾರಿ ಅವರು ಚೆಕ್ ಗಣರಾಜ್ಯದ ಬಾರ್ಬೊರ ಕ್ರೆಝೊಕೊವಾ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದು ಸೆಮಿಫೈನಲ್ ನಲ್ಲಿ ರಷ್ಯಾದ ಅನಾಸ್ಟೆಸಿಯಾ ಪಾವ್ಲೂಚೆಂಕೊವಾ ಮತ್ತು ಸ್ಲೋವೆನಿಯಾದ ತಮಾರ ಝಿಡಂಸೆಕ್ ಅವರನ್ನು ಎದುರಿಸಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd