March 1 ರಿಂದ ಈ ನಿಯಮಗಳಲ್ಲಿ ಬದಲಾವಣೆ ಸಾಧ್ಯತೆ….
2023 ನೇ ಇಸವಿಯ ಫೆಬ್ರವರಿ ತಿಂಗಳು ಮುಗಿಯಲು ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಮಾರ್ಚ್ 1 ರಿಂದ ಹಲವಾರು ನಿಯಮಗಳು ಬದಲಾಗುತ್ತಿದ್ದು ನಿಮ್ಮ ಖರ್ಚಿನ ಬಜೆಟ್ ಮೇಲೆಯೂ ಪರಿಣಾಮ ಬೀರಲಿದೆ. ಮಾರ್ಚ್ ತಿಂಗಳಿನಲ್ಲಿ ಬ್ಯಾಂಕ್ ಸಾಲಗಳು, ಎಲ್‌ಪಿಜಿ ಸಿಲಿಂಡರ್‌ಗಳು, ಬ್ಯಾಂಕ್ ರಜಾದಿನಗಳು ಇತ್ಯಾದಿಗಳನ್ನು ಒಳಗೊಂಡಂತೆ ಹಲವು ಪ್ರಮುಖ ಬದಲಾವಣೆಗಳನ್ನು ಕಾಣಬಹುದು.
ಬ್ಯಾಂಕ್ ಸಾಲ ದುಬಾರಿಯಾಗಬಹುದು
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋ ದರವನ್ನು ಹೆಚ್ಚಿಸಿದೆ. ಇದಾದ ನಂತರ ಹಲವು ಬ್ಯಾಂಕ್‌ಗಳು ಎಂಸಿಎಲ್‌ಆರ್ ದರವನ್ನು ಹೆಚ್ಚಿಸಿವೆ. ಇದು ನೇರವಾಗಿ ಸಾಲ ಮತ್ತು ಇಎಂಐ ಮೇಲೆ ಪರಿಣಾಮ ಬೀರುತ್ತದೆ. ಸಾಲದ ಬಡ್ಡಿದರಗಳು ಹೆಚ್ಚಾಗಬಹುದು.
LPG ಮತ್ತು CNG ಬೆಲೆಗಳು ಹೆಚ್ಚಾಗಬಹುದು
LPG, CNG, ಮತ್ತು PNG ಗ್ಯಾಸ್ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ. ಕಳೆದ ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡದಿದ್ದರೂ ಈ ಬಾರಿ ಹಬ್ಬದ ನಿಮಿತ್ತ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.
ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ
ಬೇಸಿಗೆಯ ಆಗಮನದ ಕಾರಣ, ಭಾರತೀಯ ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ವೇಳಾಪಟ್ಟಿ ಬದಲಾವಣೆ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಮಾಧ್ಯಮ ವರದಿಗಳ ಪ್ರಕಾರ… ಮಾರ್ಚ್ 1 ರಿಂದ ಸಾವಿರಾರು ಪ್ಯಾಸೆಂಜರ್ ರೈಲುಗಳು ಮತ್ತು 5,000 ಗೂಡ್ಸ್ ರೈಲುಗಳ ವೇಳಾಪಟ್ಟಿಯನ್ನ ಬದಲಾಯಿಸಬಹುದು.
ಮಾರ್ಚ್‌ನಲ್ಲಿ 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ
ಮಾರ್ಚ್‌ನಲ್ಲಿ ಹೋಳಿ ಯುಗಾದಿ ಸೇರಿದಂತೆ ಹಲವು ಹಬ್ಬಗಳಿರುವುದರಿಂದ ಹಲವು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು 12 ಕ್ಕೂ ಹೆಚ್ಚು ದಿನಗಳ ಕಾಲ ರಜಾ ಇರಲಿವೆ.
From March 1 these rules are likely to change….