ಇಂದಿನಿಂದ ದೇಶಾದ್ಯಂತ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ….
ಇಂದಿನಿಂದ ದೇಶಾದ್ಯಂತ 15 ರಿಂದ 18 ವರ್ಷದ ಮಕ್ಕಳಿಗೆ ಕರೋನಾ ಲಸಿಕೆಯನ್ನ ನೀಡಲು ಪ್ರಾರಂಭಿಸಲಾಗಿದೆ. ಕರ್ನಾಟಕ ಗುಜರಾತ್ ಉತ್ತರಪ್ರದೇಶ ಪಾಂಡಿಚೇರಿ ಸೇರಿದಂತೆ ಹಲವು ರಾಜ್ಯಗಳು ಇಂದು ವಿದ್ಯುಕ್ತವಾಗಿ ಕರೋನಾ ಲಸಿಕೆ ನೀಡಲು ಚಾಲನೆ ನೀಡಿವೆ.
ಗುಜರಾತ್ | 15-18 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಲು ಅಹಮದಾಬಾದ್‌ನಲ್ಲಿ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ 15-18 ವರ್ಷದೊಳಗಿನ 1.4 ಕೋಟಿ ಮಕ್ಕಳಿದ್ದು, ಮಕ್ಕಳಿಗೆ ಲಸಿಕೆ ಹಾಕಲು ರಾಜ್ಯಾದ್ಯಂತ 2,150 ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಇಂದಿನಿಂದ ಮಕ್ಕಳಿಗೆ ವ್ಯಾಕ್ಸಿನೇಷನ್ ಶುರುವಾಗಲಿದ್ದು. ಮಕ್ಕಳಿಗಾಗಿ 25 ಲಕ್ಷ ಕೋವ್ಯಾಕ್ಸಿನ್ ಲಸಿಕೆಯನ್ನ ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಮೊದಲಿಗೆ ಒಂದು ಶಾಲೆಯ 50 ಮಕ್ಕಳಿಗೆ ಮಾತ್ರ ಲಸಿಕೆ ನಿಡಲಾಗುತ್ತದೆ. ಲಸಿಕೆ ತೆಗೆದುಕೊಲ್ಳುವ ಮಕ್ಕಳಿಗೆ ವಿಶ್ರಾಂತಿ ಕೋಣೆಯನ್ನ ಏರ್ಪಡಿಸಲಾಗಿದೆ. ಮತ್ತು ಲಸಿಕೆ ಪಡೆಯುವ ಸಮಯದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಹ ಇರಲಿದೆ. ಲಸಿಕೆ ಪಡೆದ ನಂತರ ಸ್ವಲ್ಪ ಪ್ರಮಾಣದ ಜ್ವರ ಸುಸ್ತು ಕೈನೋವು ಕಾಣಿಸಿಕೊಳ್ಳುವುದರಿಂದ ಲಸಿಕೆ ಪಡೆದ ನಂತರ ಒಂದು ದಿನದ ರಜೆಯನ್ನ ನಿಡಲಾಗುತ್ತಿದೆ.








