ತಡರಾತ್ರಿ ಗದಗ ಜಿಲ್ಲೆಯ ಯೋಧನ ಅಂತ್ಯಕ್ರಿಯೆ

1 min read
Gadag saaksha tv

ತಡರಾತ್ರಿ ಗದಗ ಜಿಲ್ಲೆಯ ಯೋಧನ ಅಂತ್ಯಕ್ರಿಯೆ Gadag saaksha tv

ಗದಗ : ಛತ್ತೀಶ್ ಗಢದಲ್ಲಿ ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಗದಗ ಜಿಲ್ಲೆಯ ಯೋಧನ ಪಾರ್ಥಿವ ಶರೀರ ತಡರಾತ್ರಿ ತಾಯಿ ನಾಡಿಗೆ ಬಂದಿದ್ದು, ಸಕಲ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.

ಕರ್ತವ್ಯ ನಿರತ ವೇಳೆ ಸರ್ವಿಸ್ ರೈಫಲ್ ನಿಂದ ಅಚಾನಕ್ ಆಗಿ ಗುಂಡು ಮರಳಿ ತಗುಲಿ ಯೋಧ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದ ಲಕ್ಷ್ಮಣ್ ಗೌರಣ್ಣವರ ಮೃತಪಟ್ಟಿದ್ದರು.

Gadag saaksha tv

ಕಳೆದ 12 ವರ್ಷಗಳಿಂದ ಬಿಎಸ್ ಎಫ್ ನಲ್ಲಿ ಲಕ್ಷ್ಮಣ್ ಸೇವೆ ಸಲ್ಲಿಸುತ್ತಿದ್ದರು. ಕಳೆದ 2 ತಿಂಗಳು ಹಿಂದೆಯಷ್ಟೇ ಊರಿಗೆ ಬಂದು ಹೋಗಿದ್ದರು.

ಈಗ ಮತ್ತೆ ಶವವಾಗಿ ತಾಯಿನಾಡಿಗೆ ಯೋಧನ ಪಾರ್ಥಿವ ಶರೀರ ಬಂದಿದ್ದು, ವಾಹನ ಬರುತ್ತಿದ್ದಂತೆ ನೆರೆದ ಜನರು ಭಾರತಾಂಬೆಗೆ ಜೈಘೋಷ ಕೂಗಿದರು.

ಪುಷ್ಪಗೈಯುವ ಮೂಲಕ ಯೋಧನ ಮೃತದೇಹ ಬರಮಾಡಿಕೊಂಡರು. ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳ ಮೂಲಕ ಗದಗ ಜಿಲ್ಲೆಯ ಗೋಜನೂರು ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.

karnataka

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd