Gadag : ಅವಳಿ ನಗರದ 35 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಗದಗ : ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಬಂದ್ ಮಾಡಲಾಗಿದೆ.. ಅವಳಿ ನಗರದ 35 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗೋ ಸಾಧ್ಯತೆಯಿದೆ..
ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಮೂರು ಪಂಪಹೌಸ್ ಸ್ಥಗಿತಗೊಂಡಿದೆ..
ಮೂರು ಪಂಪಹೌಸ್ ಸ್ಥಗಿತಗೊಳಿಸಿ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ..
ಕಳೆದ ಐದು ತಿಂಗಳಿಂದ ವೇತನ ನೀಡದಿದಕ್ಕೆ ಆಕ್ರೋಶಗೊಂಡಿದ್ದು , ಪಂಪಹೌಸ್ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ..
ಡಂಬಳ, ಪಾಪನಾಶಿ ಮೂರು ಕಡೆ ಪಂಪಹೌಸ್ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದಾರೆ..
ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗುವ ಲಕ್ಷಣ ಕಾಣ್ತಿದೆ..
ಇನ್ನೂ ಈಗಾಗಲೇ ಗದಗ-ಬೆಟಗೇರಿ ಅವಳಿ ನಗರಕ್ಕೆ 10, 15 ದಿನಕ್ಕೆ ಒಂದು ಸಾರಿ ನೀರು ಸರಬರಾಜು ಮಾಡಲಾಗ್ತಿದೆ.
ಈವಾಗ ಹೋರಾಟ ಮಾಡ್ತಾಯಿರೋದರಿಂದ ಇನ್ನೂ ನೀರಿನ ಸಮಸ್ಯೆ ಉಲ್ಬಣಗೊಂಡಿದೆ..
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ನಿಂದ ಅವಳಿ ನಗರದಕ್ಕೆ ನೀರು ಸರಬರಾಜು.
ನೀರು ಸರಬರಾಜು ಮಾಡುವ ಪಂಪಹೌಸ್ ಬಂದ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ..
ವೇತನ ನೀಡಿ ನೀರು ಬಿಡುತ್ತೇವೆ ಎಂದು ಸಿಬ್ಬಂದಿಗಳು ಪಟ್ಟು ಹಿಡಿದಿದ್ದಾರೆ..








