Gadwal-bidda-kid-no-more ಗದ್ವಾಲ್ ಬಿಡ್ಡ ಮಲ್ಲಿಕಾರ್ಜುನ್ ನಿಧನ
ನೀನ್ಯಾರೋ ನನಗೆ ಗೊತ್ತಿಲ್ಲ ಎನ್ನುತ್ತಲೇ ಸಾಕಷ್ಟು ಫಾಲೋಯಿಂಗ್ ಹೊಂದಿದ್ದ ಗದ್ವಾಲ್ ಬಿಡ್ಡ ಮಲ್ಲಿಕಾರ್ಜುನ್ ಇನ್ನಿಲ್ಲ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದ ಈ ಹುಡುಗ, ಪ್ರತಿ ನಿತ್ಯ ವಿಡಿಯೋ, ಮಿಮ್ಸ್, ಸ್ಟಿಕ್ಕರ್ ಗಳಲ್ಲಿ ಕಾಣಿಸುತ್ತಿದ್ದ. ಹೀಗಾಗಿ ಮಲ್ಲಿಕಾರ್ಜುನ್ ಮರಣದ ಸುದ್ದಿ ತಿಳಿಯುತ್ತಿದ್ದಂತೆ ನೆಟ್ಟಿಗರು ಸಂತಾಪ ಸೂಚಿಸಿದ್ದಾರೆ. Gadwal-bidda-kid-no-more ಗದ್ವಾಲ್ ಬಿಡ್ಡ ಮಲ್ಲಿಕಾರ್ಜುನ್ ನಿಧನ
ಅದು ಮಿಮ್ಸ್ ಪೇಜ್ ಗಳು ಅಂಬೆಗಾಲು ಇಡುತ್ತಿದ್ದ ಸಮಯ. ಈ ಸಮಯದಲ್ಲಿ ನಿರ್ದೇಶಕ ಆರ್ ಜಿವಿಯ ಟೈಟಲ್ ವಿಚಾರ ಭಾರಿ ಸದ್ದು ಮಾಡಿತ್ತು. ಆಗ ಗದ್ವಾಲ್ ಬಿಡ್ಡ ಅಂತ ಪರಿಯಚ ಮಾಡಿಕೊಳ್ಳುತ್ತಾ, ಮಲ್ಲಿಕಾರ್ಜುನ್ ಒಂದು ವಿಡಿಯೋ ಮಾಡಿದ್ದ. ಅದು ಸಾಕಷ್ಟು ವೈರಲ್ ಆಗಿತ್ತು.
ಜೊತೆಗೆ ಲೈಕ್ ಚೇಯಂಡಿ, ಶೇರ್ ಚೇಯಂಡಿ ಸಬ್ಸ್ ಕ್ರೈಬ್ ಮಾಡಿ ಅನ್ನೋದನ್ನ ತೊದಲುತ್ತಾ ಹೇಳಿದ್ದ ಮಲ್ಲಿಕಾರ್ಜುನ್ ರಾತ್ರೋ ರಾತ್ರಿ ವೈರಲ್ ಆಗಿದ್ದ. ಜೊತೆಗೆ ಮಿಮ್ಸ್ ಪೇಜ್ ಗಳು ಕೂಡ ಮಲ್ಲಿಕಾರ್ಜುನ್ ಸಿಕ್ಕರ್ ಗಳನ್ನ ಬಳಸುತ್ತಿದ್ದವು. ಈಗಲೂ ಮಲ್ಲಿಕಾರ್ಜುನ್ ವಿಡಿಯೋಗಳನ್ನು ಹಲವಾರು ಮಿಮ್ಸ್ ಪೇಜ್ ಗಳು ಬಳಸಿಕೊಳ್ಳುತ್ತಿವೆ.
ಈ ಮಧ್ಯ ಮಲ್ಲಿಕಾರ್ಜುನ್ ಆಸ್ತಮದಿಂದ ಕಣ್ಣುಮುಚ್ಚಿದ್ದಾನೆ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ, ನೆಟ್ಟಿಗರು ಸಂತಾಪ ಸೂಚಿಸುತ್ತಿದ್ದಾರೆ.