ADVERTISEMENT
Thursday, September 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಗಣಪತಿ ಬಪ್ಪ ಮೋರಿಯಾ’ ಚಿತ್ರದ ಟೈಟಲ್, ಫಸ್ಟ್ ಲುಕ್ ಪೋಸ್ಟರ್ ಅನಾವರಣ

admin by admin
September 17, 2026
in Cinema, Newsbeat, Uncategorized, ಮನರಂಜನೆ
ganapati-bappa-morya-kannada-movie-title-first-look-poster-unveiled

ganapati-bappa-morya-kannada-movie-title-first-look-poster-unveiled

Share on FacebookShare on TwitterShare on WhatsappShare on Telegram

ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಕಥೆಗಳ ಅಲೆ ಜೋರಾಗಿದ್ದು, ಇದೀಗ ಮತ್ತೊಂದು ವಿಭಿನ್ನ ಹಾಗೂ ಭರವಸೆಯ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ‘ಗಣಪತಿ ಬಪ್ಪ ಮೋರಿಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಟೈಟಲ್ ಜೊತೆಗೆ ಆಕರ್ಷಕ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.

ಸಂಪೂರ್ಣ ಹೊಸತನದಿಂದ ಕೂಡಿರುವ ಪೋಸ್ಟರ್ ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಈ ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬರಲಿದೆ. ಕಥೆಯ ಗಟ್ಟಿತನಕ್ಕಾಗಿ ಚಿತ್ರತಂಡ ಬರೋಬ್ಬರಿ ಒಂದೂವರೆಯಿಂದ ಎರಡು ವರ್ಷಗಳ ಕಾಲ ಪ್ರಿ-ಪ್ರೊಡಕ್ಷನ್ ನಡೆಸಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಎರಡನೇ ಹಂತದ ಶೂಟಿಂಗ್ ಭರದಿಂದ ಸಾಗಲಿದೆ.

Related posts

mangala-gowri-movie-announcement-malashree-rukmini-vasanth-kvn-productions

ಮಾಲಾಶ್ರೀ – ರುಕ್ಮಿಣಿ ವಸಂತ್ ಕಾಂಬಿನೇಷನ್‌ನಲ್ಲಿ ‘ಮಂಗಳ ಗೌರಿ’ ಚಿತ್ರ ಘೋಷಣೆ: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಾಕ್ಷಾಯಣಿ ಟಾಕೀಸ್ ಜಂಟಿ ನಿರ್ಮಾಣ!

September 17, 2026
naaku-tanti-kannada-movie-four-actresses-khushi-ravi-roshini-prakash-sangeetha-bhat-sindhu-srinivasa-murthy |

‘ನಾಕು ತಂತಿ’ ಚಿತ್ರಕ್ಕಾಗಿ ಒಂದಾದ ನಾಲ್ವರು ಪ್ರತಿಭಾವಂತ ನಟಿಯರು: ಖುಷಿ ರವಿ, ರೋಷಿನಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಜುಗಲ್‌ಬಂದಿ!

September 17, 2026

ಚಿತ್ರದಲ್ಲಿ ಭರವಸೆಯ ಯುವ ತಾರಾಗಣವಿದ್ದು, ‘ಮನದ ಕಡಲು’ ಸುಮುಖ, ‘ಟಾಮ್ ಅಂಡ್ ಜೆರಿ’ ಖ್ಯಾತಿಯ ನಿಶ್ಚಿತ್ ಕರೋಡಿ, ‘ಬಿಂಗೋ’ ಚಿತ್ರದ ಚಂದನ್ ಆರ್.ಕೆ ಹಾಗೂ ‘ಕಾಮಿಡಿ ಕಿಲಾಡಿಗಳು’ ಸೂರಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ತೆಲುಗು ನಟಿ ಬಾಂಧವಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಡಿಷನ್ ಮೂಲಕ ರಾಜ್ಯಾದ್ಯಂತ ಆಯ್ಕೆಯಾದ ಹಲವು ಹೊಸ ಪ್ರತಿಭೆಗಳಿಗೂ ಚಿತ್ರದಲ್ಲಿ ಅವಕಾಶ ನೀಡಲಾಗಿದೆ.
ಚಿತ್ರಕ್ಕೆ ಬಲಿಷ್ಠ ತಾಂತ್ರಿಕ ತಂಡದ ಸಾಥ್ ಸಿಕ್ಕಿದ್ದು, ಹೊಸ ಪ್ರತಿಭೆ ಸಂಜಯ್ ಕೆ. ಕೆ. ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವಣ್ಣ ಅಭಿನಯದ ‘ಘೋಸ್ಟ್’ ಚಿತ್ರಕ್ಕೆ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದ ಪ್ರಸನ್ನ ಈ ಚಿತ್ರಕ್ಕೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ‘ಮರ್ಫಿ’ ಖ್ಯಾತಿಯ ಆನಂದ್ ಮೀನಾಕ್ಷಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ‘ಕಾಟೇರ’ ಖ್ಯಾತಿಯ ಗುಣ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರೆ, ಮಹೇಶ್ ತೊಗಟ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರವನ್ನು ‘ರಾಯಲ್ ಫ್ಲೈ ಎಂಟರ್ಟೈನ್ಮೆಂಟ್ಸ್’ (Royal Fly Entertainments) ಬ್ಯಾನರ್ ಅಡಿಯಲ್ಲಿ ಲಾರೆನ್ಸ್ ಜೋಸೆಫ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

Tags: #GanapatiBappaMorya #KannadaCinema #SanjayKK #Sumukha #NischithKarodi #BandhaviSridhar #MithunMukundan #Sandalwood #saakshatv
ShareTweetSendShare
Join us on:

Related Posts

mangala-gowri-movie-announcement-malashree-rukmini-vasanth-kvn-productions

ಮಾಲಾಶ್ರೀ – ರುಕ್ಮಿಣಿ ವಸಂತ್ ಕಾಂಬಿನೇಷನ್‌ನಲ್ಲಿ ‘ಮಂಗಳ ಗೌರಿ’ ಚಿತ್ರ ಘೋಷಣೆ: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಾಕ್ಷಾಯಣಿ ಟಾಕೀಸ್ ಜಂಟಿ ನಿರ್ಮಾಣ!

by admin
September 17, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಹಾಗೂ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಎರಡು ತಲೆಮಾರಿನ ಖ್ಯಾತ ನಟಿಯರನ್ನು...

naaku-tanti-kannada-movie-four-actresses-khushi-ravi-roshini-prakash-sangeetha-bhat-sindhu-srinivasa-murthy |

‘ನಾಕು ತಂತಿ’ ಚಿತ್ರಕ್ಕಾಗಿ ಒಂದಾದ ನಾಲ್ವರು ಪ್ರತಿಭಾವಂತ ನಟಿಯರು: ಖುಷಿ ರವಿ, ರೋಷಿನಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಜುಗಲ್‌ಬಂದಿ!

by admin
September 17, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ನೈಜ ಹಾಗೂ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖುಷಿ ರವಿ, ರೋಷಿನಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸ...

anmotsava-kannada-movie-trailer-ganeshotsava-one-night-thriller

ಒಂದೇ ರಾತ್ರಿಯ ಕಥೆ, ಗಣೇಶೋತ್ಸವದ ರೋಚಕ ಹಿನ್ನೆಲೆ: ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

by admin
September 17, 2026
0

ಬೆಂಗಳೂರು: ಗಣೇಶೋತ್ಸವ ಮತ್ತು ವಿಸರ್ಜನೆಯ ಭವ್ಯ ಬೆಳಕಿನ ಹಿನ್ನೆಲೆಯಲ್ಲಿ, ಕೇವಲ ಒಂದೇ ರಾತ್ರಿಯಲ್ಲಿ ತೆರೆದುಕೊಳ್ಳುವ ವಿಭಿನ್ನ ಕಥಾಹಂದರ ಹೊಂದಿರುವ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ...

76 ಮೇಣದಬತ್ತಿಗಳ ಕಂಗೊಳಿಸುವ ಬೆಳಕಿನಲ್ಲಿ ಮೋದಿಯವರಿಗಾಗಿ ಮಂಗಳೂರು ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ

by admin
September 17, 2026
0

mangaluru-church-special-prayer-for-pm-modi-76th-birthday ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಮಂಗಳೂರಿನ ಬಿಕರ್ನಕಟ್ಟೆಯ Infant Jesus ಚರ್ಚ್‌ನಲ್ಲಿ ಭಕ್ತಿಭಾವ ಹಾಗೂ ಶುಭ ಹಾರೈಕೆಗಳ ವಾತಾವರಣದಲ್ಲಿ ವಿಶೇಷ...

ಆಟೊಮೇಷನ್ ತಂತ್ರಜ್ಞಾನದತ್ತ ಆಕ್ಸಿಸ್ ಬ್ಯಾಂಕ್, ಟೆಕ್‌ ದೈತ್ಯ ಕಾಗ್ನಿಜೆಂಟ್ ಜೊತೆ ಮಹತ್ವದ ಒಪ್ಪಂದ

ಆಟೊಮೇಷನ್ ತಂತ್ರಜ್ಞಾನದತ್ತ ಆಕ್ಸಿಸ್ ಬ್ಯಾಂಕ್, ಟೆಕ್‌ ದೈತ್ಯ ಕಾಗ್ನಿಜೆಂಟ್ ಜೊತೆ ಮಹತ್ವದ ಒಪ್ಪಂದ

by admin
September 17, 2026
0

ಬೆಂಗಳೂರು: ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಹಾಗೂ ಖ್ಯಾತ ಎಐ ಮತ್ತು ತಂತ್ರಜ್ಞಾನ ಸೇವಾ ಕಂಪನಿಯಾದ ಕಾಗ್ನಿಜೆಂಟ್ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram