ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಧಾನಸೇವಕನೇ : ಶ್ರೀ‌ ವಿನಯ್ ಗುರೂಜಿ

1 min read

ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಧಾನಸೇವಕನೇ- ಶ್ರೀ‌ ವಿನಯ್ ಗುರೂಜಿ Gandhi Jayanthi Saaksha tv

ಅಕ್ಟೋಬರ್ : ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಆಶ್ರಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಸ್ಚಚ್ಛತಾ ಕಾರ್ಯಕ್ರಮ ಮತ್ತು ಕ್ಲೀನಥಾನ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆ 7 ಗಂಟೆಗೆ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಅವಧೂತ ವಿನಯ್ ಗುರೂಜಿ ಅವರು ಸ್ವಚ್ಛ ಭಾರತದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಮಾಡಿದರು.

“ದೇಶದಲ್ಲಿರೋ ಪ್ರತಿಯೊಬ್ಬರು ಪ್ರಧಾನ ಸ್ಥಾನದಲ್ಲೇ ಇದ್ದಾರೆ. ಎಲ್ಲರೂ ಒಗ್ಗೂಡಿದರೆ ಎಲ್ಲವೂ ಸುಲಭ ಸಾಧ್ಯವಾಗುತ್ತದೆ. ಜಾತಿ ಇಲ್ಲದ ಗುಂಪು ಎಂದು ಯಾವುದಾದರೂ ಇದ್ದರೆ ಅದು ವಿದ್ಯಾರ್ಥಿಗಳು ಮಾತ್ರ. ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಹೆಚ್ಚು ಜವಾಬ್ದಾರಿಗಳನ್ನು ತೆಗೆದುಕೊಂಡು ಸಮಾಜವನ್ನು ಮುನ್ನಡೆಸಬೇಕು” ಎಂದು ಯುವಜನತೆಯಲ್ಲಿ ಉತ್ಸಾಹ ಮೂಡಿಸಿದರು.

Gandhi Jayanthi Saaksha tv

ದೇಶವನ್ನ ಸ್ವಚ್ಛ ಗೊಳಿಸುವ ಮುನ್ನ ನಮ್ಮ ನಮ್ಮ ಮನಸ್ಸುಗಳನ್ನು ಸ್ವಚ್ಛಗೊಳೊಸಿಕೊಂಡು ಕಲ್ಮಶಗಳನ್ನು ಹೊರಹಾಕಿ ಕೆಲಸ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಶ್ರೀ ವಿನಯ್ ಗುರೂಜಿ ಅವರು ವಿಶ್ವವಿದ್ಯಾಲಯ ಕ್ಯಾಂಪಸ್ ನ ಬಯೋ ಪಾರ್ಕ್ ನ ಸ್ಚಚ್ಛತಾ ಕಾರ್ಯ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಲ್ಲಿ ಭಾಗಿಯಾಗಿ ಯುವಜನತೆಗೆ ಮಾದರಿಯಾದರು.

ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾಟ್ರಸ್ಟ್ ಉಪಾಧ್ಯಕ್ಷ ಹಾಗೂ ಶಿಲ್ಪಾ ಫೌಂಡೇಶನ್ ಸಂಸ್ಥಾಪಕರಾದ ಅಚ್ಯುತ್ ಗೌಡರು, ಟ್ರಸ್ಟ್ ಕಾರ್ಯದರ್ಶಿ ಶಿವರಾಜ್, ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರೇಮ್, ಬಯೋಪಾರ್ಕ್ ಉಸ್ತುವಾರಿ ಗಿರೀಶ್ ಅವರುಗಳು ಉಪಸ್ಥಿತರಿದ್ದರು. ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ನೂರಾರು ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಸಾಕ್ಷಿಯಾದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd