ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಹೊಸ ಚಿತ್ರ “ತ್ರಿಬಲ್ ರೈಡಿಂಗ್ “ ನ ಶೂಟಿಂಗ್ ಶೀಘ್ರವೇ ಶುರುವಾಗಲಿದೆ.
ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಗಣಿ ಅವರ ತ್ರಿಬಲ್ ರೈಡಿಂಗ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಇಷ್ಟು ದಿನಗಳ ಕಾಲ ಕೊರೊನಾ ಲಾಕ್ ಡೌನ್ ನಿಂದಾಗಿ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಒಂದೊಂದೇ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ.
ಅದರಂತೆ ಅಕ್ಟೋಬರ್ 2ನೇ ವಾರದಲ್ಲಿ ತ್ರಿಬಲ್ ರೈಡಿಂಗ್ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಕಾಮಿಡಿ, ಲವ್ ಸ್ಟೋರಿ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನೆಮಾಗೆ ಮಹೇಶ್ ಗೌಡ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ರಾಮ್ ಗೋಪಾಲ್ ವೈ ಎಂ ಬಂಡವಾಳ ಹೂಡುತ್ತಿದ್ದಾರೆ.
ಕೃಪಾಳು ಎಂಟರ್ ಟೈನ್ ಮೆಂಟ್ ಲಾಂಛನದಡಿ ಚಿತ್ರ ಮೂಡಿಬರಲಿದ್ದು, ಸಾಯಿಕಾರ್ತಿಕ್ ಅವರ ಸಂಗೀತ ಚಿತ್ರಕ್ಕಿದೆ. ಆನಂದ್ ಛಾಯಾಗ್ರಹಣ ಚಿತ್ರಕ್ಕಿದ್ದು, ಮಹೇಶ್ ಗೌಡ ಅವರು ಸಂಭಾಷಣೆ ಬರೆದಿದ್ದಾರೆ.
ಗಣಿ ನಾಯಕನಾಗಿದ್ರೆ, ಸಾಧುಕೋಕಿಲ , ರವಿಶಂಕರ್, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ದೊಡ್ಡ ನಟರ ತಾರಾಬಳಗವೇ ಚಿತ್ರದಲ್ಲಿದೆ. ಇನ್ನೂ ಚಿತ್ರದ ನಾಯಕಿ ಫೈನಲ್ ಆಗಿಲ್ಲ ಎನ್ನಲಾಗಿದೆ.








