Gang rape ರಾಂಚಿ:15 ವರ್ಷದ ಬಾಲಕಿ (Minor girl) ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ 2019 ರಲ್ಲಿ ದಾಖಲಾಗಿತ್ತು.
ಪೊಲೀಸರು ಆರೋಪಿಗಳಿಗಾಗಿ ನಿರಂತರವಾಗಿ ಹುಡುಕಾಟ ನಡೆಸಿದ್ದರು. ವರದಿಗಳ ಪ್ರಕಾರ ಸಂತ್ರಸ್ತ ಬಾಲಕಿಯ ಮೇಲೆ 2-3 ವರ್ಷದಿಂದ 3-4 ರಾಜ್ಯಗಳಲ್ಲಿ ನಿರಂತರವಾಗಿ ಅತ್ಯಾಚಾರ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ .
ಈ ಹುಡುಗಿಯು ಕಳ್ಳಸಾಗಣೆಗೆ ಒಳಗಾಗಿದ್ದು, ಹಲವು ಸ್ಥಳಗಳಲ್ಲಿ ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು . ಆರೋಪಿಗಳಲ್ಲಿ ಒಬ್ಬ ರಾಜಕೀಯ ನಾಯಕನೂ ಸೇರಿದ್ದ ಎಂದು ತಿಳಿದು ಬಂದಿದೆ.
ಆರೋಪಿಯಾದ ರಾಜಕೀಯ ನಾಯಕನಾಗಿರುವ ಬಂಧಿಸಲು ಪೊಲೀಸರು ನೆರೆಯ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದು . ಆತ ಪ್ರತಿ ಬಾರಿಯೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದು ಎಂದು ತಿಳಿದು ಬಂದಿದೆ . ಆತನ ಹುಡುಕಾಟಕ್ಕಗಿ ಬೇರೆ ರಾಜ್ಯಗಳಿಗೆ ಹೊಗುತ್ತಿರುವುದು 5ನೇ ಬಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಬಾಲಕಿ ಮೇಲೆ ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಪೂರ್ವ ಸಿಂಗ್ಭೂಮ್ ಜಿಲ್ಲೆಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ .
ಬಾಲಕಿಗೆ ಡೈರಿ ಬರೆಯೊ ಹವ್ಯಾಸ ವಿದ್ದು ಅದರಲ್ಲಿ ಆಕೆ ಕೆಲ ಆರೋಪಿಗಳ ಹೆಸರು ಹಾಗೂ ಸಂಖ್ಯೆಗಳನ್ನು ಬರೆದಿದ್ದಾಳೆ ಎಂದು ತನಿಕೆಯ ವೆಳೆ ತಿಳಿದುಬಂದಿದೆ . ಈ ಡೈರಿ ಮೂಲಕ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಪಡೆದಿದ್ದಾರೆ.
ಈ ಪ್ರಕರಣವು 2019ರಲ್ಲಿ ಸಿಂಗ್ಭೂಮ್ನ ಹೋಟೆಲ್ ಮಾಲೀಕರಿಂದ ಮಾಹಿತಿ ಪಡೆದ ಬಳಿಕ ದಾಖಲಾಗಿದೆ ಎಂದು ತಿಳಿದು ಬಂದಿದೆ . ಪೊಲೀಸರು ಆರೋಪಿಗಳನ್ನು ಬಂಧಿಸಲು ಛತ್ತೀಸ್ಗಢಕ್ಕೆ ತೆರಳಿರುವುದು ಮೊದಲೇನಲ್ಲ. 10 ಆರೋಪಿಗಳ ಪೈಕಿ ಐವರನ್ನು ಈಗಾಗಲೇ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದು. ರಾಜಕೀಯ ಪಕ್ಷದ ನಾಯಕ ಸೇರಿದಂತೆ ಇನ್ನುಳಿದ ಐವರನ್ನು ಬಂಧಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.
ಮಾಹಿತಿಯ ಪ್ರಕಾರ 2013 ರಲ್ಲಿ ಬಾಲಕಿ ಮೇಲೆ ಮೊದಲ ಬಾರಿಗೆ ತನ್ನ ಸಂಬಂಧಿಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ . ನಂತರ ಅವಳ ಸಂಬಂಧಿಕರೇ ಅವಳನ್ನು ಪೂರ್ವ ಸಿಂಗ್ಭೂಮ್ನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದರು.
ವಿಪರ್ಯಾಸ ಎಂದರೆ ಅಲ್ಲಿ ಇನ್ನೊಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ನಂತರ ಆಕೆಯನ್ನು ರೈಲಿನಲ್ಲಿ ಛತ್ತೀಸ್ಗಢದ ರಾಜಧಾನಿ ರಾಯ್ಪುರಕ್ಕೆ ಕರೆದೊಯ್ದು ಫ್ಲಾಟ್ನಲ್ಲಿ ಇರಿಸಿ . ಅಲ್ಲಿ ಆಕೆಯ ಮೇಲೆ 8 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ