ತಂದೆ ಜೊತೆ ಕೂಲಿ ಕೆಲಸಕ್ಕೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ , ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿಗಳು..!
ಆಂಧ್ರ ಪ್ರದೇಶ : ತಂದೆಯ ಜೊತೆ ಕೂಲಿ ಕೆಲಸ ಮಾಡಲು ಬಂದಿದ್ದ ಯುವತಿಯನ್ನು ಕಾರ್ಮಿಕರು ಎಳೆದೊಯ್ದು ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಯಾಗಂಟಿಪಲ್ಲಿ ಬಳಿ ನಡೆದಿದೆ.
ಈ ಬಗ್ಗೆ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನೊರ್ವನನ್ನು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕರ್ನೂಲ್ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಲೇರು-ನಗರಿನ ಪ್ರಾಜೆಕ್ಟ್ ಸಂಬಂಧ ತಂದೆಯ ಜೊತೆ ಕೂಲಿ ಕೆಲಸ ಮಾಡಲು ಬಂದಿದ್ದ ಅಪ್ರಾಪ್ತ ಯುವತಿಯ ಮೇಲೆ ಕಾಮುಖರು ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದಾರೆ.
ಮೃತ ಯುವತಿ ತೆಲಂಗಾಣದ ನಾರಾಯಣ ಪೇಟೆಯವಳು. ಕಳೆದ ಕೆಲ ದಿನಗಳಿಂದ ಕೂಲಿ ಕೆಲಸಕ್ಕೆಂದು ತಂದೆಯೊಂದಿಗೆ ಬಂದಿದ್ದಳು. ಇನ್ನು ಯುವತಿಯೊಂದಿಗೆ ಸಲಿಗೆಯಿಂದ ಇದ್ದ, ಕರ್ನೂಲನ ಪ್ರಾಜೆಕ್ಟನಲ್ಲಿಯೇ ಕೆಲಸ ಮಾಡುತ್ತದ್ದ ತೆಲಂಗಾಣ ಮೂಲದ ಓರ್ವ ಯುವಕನ ಬಗ್ಗೆ ಮೃತ ಯುವತಿಯ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ.








