ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ , ಕೊಲೆ – ದೌರ್ಜನ್ಯಕ್ಕೆ ಮಹಿಳೆಯರ ಬಟ್ಟೆಯೇ ಕಾರಣ ಎಂದಿದ್ದ ಇಮ್ರಾನ್ ಏನ್ ಹೇಳ್ತಾರೆ..?
ಪಾಕಿಸ್ತಾನ : ಮನುಕುಲವೇ ತಲೆ ತಗ್ಗಿಸುವಂತಹ ಹೇಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.. ಐವರು ಕಾಮುಕರು ಮೇಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾರೆ..
ಪ್ರಕರಣದ ಹಿನ್ನೆಲೆ
ಐವರು ಕಾಮುಕರ ಮೇಲೆ ಅತ್ಯಾಚಾರ , ಕೊಲೆ ಪ್ರಕರಣ ದಾಖಲಾಗಿದೆ. ಸತ್ಘರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಆರೋಪಿಗಳಾದ ನಯೀಮ್ , ನದೀಮ್ , ರಬ್ , ನವಾಜ್ ಹಾಗೂ ಮತ್ತೊಬ್ಬನ ವಿರುದ್ಧ ಕೇಸ್ ದಾಖಲಾಗಿದೆ. ಅಝರ್ ಹುಸೇನ್ ಎಂಬಾತನಿಗೆ ಸೇರಿದ ಮೇಕೆಯನ್ನ ಕಾಮುಕರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಬರ್ಬರವಾಗಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದಾರೆ. 
ಇವರನ್ನ ಸ್ಥಳೀಯರು ನೋಡಿದ್ದು, ಮೇಕೆಯ ಮಾಲೀಕನಿಗೆ ತಿಳಿಸಿದ್ದಾರೆ.. ಮಾಲೀಕ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮೇಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.. ನಂತರ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾದ ನಂತರ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಪ್ರಕರಣ ನೋಡಿದ್ರೆ ಕಳೆದೆರೆಡು ತಿಂಗಳ ಹಿಂದೆ ಪಾಕ್ ಪ್ರದಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆ ನೆನಪಾಗುತ್ತೆ.. ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರು ಧರಿಸುವ ಬಟ್ಟೆಯೇ ಕಾರಣ, ಅವರ ಬಟ್ಟೆಯೇ ಪ್ರಚೋದನೆ ನೀಡುತ್ತೆ ಅಂತ ಹೇಳಿ ವಿಶ್ವದ ಮುಂದೆ ಅವಮಾನಿತರಾಗಿದ್ದ ಇಮ್ರಾನ್ ಖಾನ್ ಇತ್ತೀಚೆಗೆ ಉಲ್ಟಾ ಹೊಡೆದಿದ್ದಾರೆ,. ನಾನು ಅಂತಹ ಹೇಳಿಕೆ ನೀಡಿಯೇ ಇಲ್ಲ ಎಂದಿದ್ದಾರೆ. ಆದ್ರೆ ಇದೀಗ ಪ್ರಾಣಿಗಳಿಗೂ ರಕ್ಷಣೆ ಇಲ್ಲದಂತಾಗಿದೆ.. ಈಗ ಏನ್ ಹೇಳ್ತಾರೆ ಇಮ್ರಾನ್ ಖಾನ್ ಅವರು ಅನ್ನೋದೇ ಪ್ರಶ್ನೆ..?







