7 ವರ್ಷದ ನಿರಾಶ್ರಿತ ಬಾಲಕಿಗೆ ಆಹಾರ ನೀಡುವ ಆಮೀಷವೊಡ್ಡಿ ಅತ್ಯಾಚಾರ..!
ಮುಂಬೈ : ಮಾಯಾನಗರಿ ಮುಂಬೈನಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.. ಮಾದಕ ವ್ಯಸನಿಯೊಬ್ಬ ಬಿಕ್ಷೆ ಬೇಡುತ್ತಿದ್ದ 7 ವರ್ಷದ ಬಾಲಕಿಗೆ ಆಹಾರ ನೀಡುವ ಆಮೀಷವೊಡ್ಡಿ ಆಕೆಯನ್ನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಗಿದ್ದಾನೆ.. ಘಟನೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. 28 ವರ್ಷದ ಡ್ರಗ್ ವ್ಯಸನಿ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿದ್ದಾನೆ.
ಪ್ರಕರಣದ ಹಿನ್ನೆಲೆ
ಬಾಲಕಿಯು ತನ್ನ ತಾಯಿಯ ಜೊತೆಗೆ ಭಿಕ್ಷೆ ಬೇಡುತ್ತಿದ್ದ ವೇಳೆ ಆಕೆಗೆ ಚಿಕನ್ ಹಾಗೂ ಅನ್ನ ನೀಡುವುದಾಗಿ ಆಮಿಷವೊಡ್ಡಿದ್ದಾನೆ.. ಬಾಲಕಿಯ ತಾಯಿ ಆಹಾರ ತರುವುದಕ್ಕೆ ಆತನ ಜೊತೆಗೆ ಕಳುಹಿಸಿಕೊಟ್ಟಿದ್ದಾಲೆ.. ಆದ್ರೆ ಆತ ಬಾಲಕಿಯನ್ನ ಅಪಹರಿಸಿ ಆಟೋದಲ್ಲಿ ಕಾಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.. ಆದ್ರೆ ಬಾಲಕಿಯ ಜೋರಾಗಿ ಕಿರುಚಾಡಿದ್ದು, ಅಲ್ಲಿಯೇ ಹತ್ತಿರದಲ್ಲಿದ್ದ ಸ್ಥಳೀಯರಿಗೆ ಕಿರುಚಾಟದ ಶಬ್ಧ ಕೇಳಿಸಿದೆ.. ಬಳಿಕ ಆರೋಪಿಯು ಬಾಲಕಿಯನ್ನ ಹೊತ್ತು ಓಡಿಹೋಗಲು ಪ್ರಯತ್ನಿಸಿದ್ದಾನೆ.. ಅಷ್ಟರಲ್ಲಿ ಸ್ಥಳೀಯರಿಬ್ಬರು ಆತನನ್ನ ಹಿಡಿದು ಥಳಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.. ಮತ್ತೊಂದೆಡೆ ಬಾಲಕಿ ಎಷ್ಟೋತ್ತಾದ್ರೂ ಬಾರದಕ್ಕೆ ಗಾಬರಿಗೊಂಡಿದ್ದ ಆಕೆಯ ತಾಯಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುಯ ದಾಖಲಿಸಿದ್ದರು.. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನ ಹಿಡಿದು ಠಾಣೆಗೆ ಎಳೆದೊಯ್ದು ಬಾಲಕಿಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ..
ಬಾಲಕಿಯ ಬಾಯಿಗೆ , ಖಾಸಗಿ ಭಾಗಗಳಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.. ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ , ಅಪಹರಣ ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.