ಮಹಿಳೆಯರ ಬಗ್ಗೆ ವಿಶ್ವಕ್ಕೆ ಗೊತ್ತಾಗುವಂತೆ ವಿವಾದಾತ್ಮಕ ಹೇಳಿಕೆ ನೀಡಿ , ಈಗ ಉಲ್ಟಾ ಹೊಡೆದ ಇಮ್ರಾನ್ ಖಾನ್..!
ಪಾಕಿಸ್ತಾನ ಆಗ್ಲೀ ಚೈನಾ ಆಗ್ಲಿ ಕಪಟ ಗುಣದಲ್ಲಿ ನಂಬರ್ 1 ಅನ್ನೋದು ಎಲ್ರಿಗೂ ಗೊತ್ತೇ ಇದೆ.. ಆದ್ರೆ ಪಾಕಿಸ್ತಾನದ ಪ್ರದಾನಿ ಇಮ್ರಾನ್ ಖಾನ್ ಅವರು ಕೆಲ ದಿನಗಳ ಹಿಂದೆ ಅಂತರಾಷ್ಟ್ರೀಯ ಮಾಧ್ಯಮಗಳ ಎದುರು ನೀಡಿದ್ದ ಹೇಳಿಕೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿತ್ತು. ಅತ್ಯಚಾರಕ್ಕೆ ಮಹಿಳೆಯರು ಧರಿಸುವ ಬಟ್ಟೆಯೇ ಕಾರಣ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು.. ಇಡೀ ವಿಶ್ವೇವೇ ಛೀ ಥೂ ಅನ್ನುವಂತಹ ಹೇಳಿಕೆ ಅದಾಗಿತ್ತು.. ಮಹಿಳೆಯರು , ಪತ್ರಕರ್ತರು , ಮಹಿಳಾ ಹೋರಾಟಗಾರರು ಇಮ್ರಾನ್ ಖಾನ್ ವಿರುದ್ಧ ತಿರುಗಿಬಿದ್ದಿದ್ದರು..
ತೀವ್ರವಾಗಿ ಇಮ್ರಾನ್ ಖಾನ್ ಹೇಳಿಕೆಯನ್ನ ಖಂಡಿಸಿದ್ದರು, ಆಕ್ರೋಶ ಹೊರಹಾಕಿದ್ದರು.. ಹಾಗಂತ ಈ ರೀತಿ ಕೇವಲ ಒಮ್ಮೆ ಮಾತ್ರ ಹೇಳಿಕೆ ನೀಡಿರಲಿಲ್ಲ. ಇದೇ ಹೇಳಿಕೆಯನ್ನೇ ಮತ್ತೊಮ್ಮೆಯೂ ನೀಡಿದ್ದರು ಇಮ್ರಾನ್. ಈ ಮೂಲಕ ಮಹಿಳೆಯರ ಬಗೆಗಿನ ತಮ್ಮ ಯೋಚನೆ ಯಾವ ರೀತಿ ಇದೆ ಅನ್ನೋದನ್ನ ತೋರಿಸಿ ವಿಶ್ವದ ಮುಂದೆ ಸಣ್ಣವರಾಗಿದ್ದ ಇಮ್ರಾನ್ ಈಗ ನಾನು ಆ ರೀತಿ ಹೇಳಿಕೆ ನೀಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಹೌದು ಅತ್ಯಾಚಾರ ನಡೆಯೋದಕ್ಕೆ ಮಹಿಳೆಯರೇ ಕಾರಣ ಅಂತ ಬಾಯಿ ಬಡೆದುಕೊಂಡಿದ್ದ ಇಮ್ರಾನ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ.. ಅಷ್ಟೇ ಅಲ್ಲ ನಾನು ಈ ರೀತಿಯಾದ ಅಸಡ್ಡೆಯಾಗಿ ಮಾತನಾಡೊದೇ ಇಲ್ಲ ಎಂದುಬಿಟ್ಟಿದ್ದಾರೆ. ಹಾಗೆಯೇ ಮಹಿಳೆಯರು ಎಷ್ಟೇ ಪ್ರಚೋದನಕಾರಿಯಾಗಿ ಬಟ್ಟೆ ಧರಿಸಿದ್ರೂ ಅತ್ಯಾಚಾರವೆಸಗುವ ಅಪರಾಧಿಯೇ ಕೃತ್ಯಕ್ಕೆ ಸಂಪೂರ್ಣ ಜವಾಬ್ದಾರಿ. ಸಂತ್ರಸ್ತರಲ್ಲ ಎನ್ನುವ ಮೂಲಕ ತಾವು ಈ ಹಿಂದೆ ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.. ಈ ಮೂಲಕ ಮತ್ತೊಮ್ಮೆ ಟ್ರೋಲ್ ಆಗ್ತಾಯಿದ್ದಾರೆ ಮಾನ್ಯ ಪಾಕ್ ಪ್ರಧಾನಿ ಇಮ್ರಾನ್ ಖಾನ್..
ಕಳೆದ ಒಂದೆರೆಡು ತಿಂಗಳ ಹಿಂದೆ ಇದೇ ಇಮ್ರಾನ್ ಖಾನ್ ಅವರು ಮಹಿಳೆಯರು ಧರಿಸುವ ಬಟ್ಟೆಗಳಿಂದಲೇ ಪ್ರಚೋದನೆಗೊಂಡು ಅತ್ಯಚಾರಿಗಳು ಅತ್ಯಾಚಾರವೆಸಗುತ್ತಾರೆ.. ಮಹಿಳೆಯರ ಬಟ್ಟೆಯೇ ಅತ್ಯಾಚಾರಕ್ಕೆ ಕಾರಣ ಅಂತೆಲ್ಲಾ ಬಾಯಿ ಬಡೆದುಕೊಂಡು ವಿಶ್ವಕ್ಕೆ ಗೊತ್ತಾಗುವಂತೆ ಹೇಳಿಕೆ ನೀಡಿದ್ದರು.. ಅಲ್ಲದೇ ನನಗೆ ನಾನು ಸಂದರ್ಶನಗಳಲ್ಲಿ ಏನೆಲ್ಲಾ ಹೇಳಿದ್ದೇನೆ ಅನ್ನೋದು ನನಗೆ ಚನ್ನಾಗಿ ಗೊತ್ತಿದೆ.. ನಾನು ಆ ರೀತಿಯಾದ ಹೇಳಿಕೆ ಕೊಟ್ಟೆ ಇಲ್ಲ ಎಂದಿದ್ದಾರೆ.