ಬಾಲಕಿ ಮೇಲೆ ಅತ್ಯಾಚಾರ – ಡ್ಯಾನ್ಸ್ ಮಾಸ್ಟರ್ ಗೆ 20 ವರ್ಷ ಜೈಲು..!
ತಮಿಳುನಾಡು : ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಡ್ಯಾನ್ಸ್ ಮಾಸ್ಟರ್ ಗೆ ತಮಿಳುನಾಡಿನ ತಿರುಚಿ ಮಹಿಳಾ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಿದೆ.. 2019ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗೆ ಶಿಕ್ಷೆ ವಿಧಿಸಿದೆ.. ಡ್ಯಾನ್ಸ್ ಮಾಸ್ಟರ್ ಸರವಣಕುಮಾರ್ ಅತ್ಯಾಚಾರವೆಸಗಿದ್ದ ಆರೋಪಿಯಾಗಿದ್ದಾನೆ. ಸಂತ್ರಸ್ತೆಯ ತಾಯಿ ನೀಡಿದ್ದ ದೂರು ಆಧರಿಸಿ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 376 (AB) (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ), ಪೋಕ್ಸೋ ಸೇರಿ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ಹಿನ್ನೆಲೆ
ಸಂತ್ರಸ್ತ ಬಾಲಕಿಯು ಅಲ್ಲಿನ ನೃತ್ಯ ತರಬೇತಿ ಕ್ಲಾಸ್ ನಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದಳು. ಅಲ್ಲಿಯೇ ಡ್ಯಾನ್ಸ್ ಮಾಸ್ಟರ್ ಆಗಿದ್ದ ಆರೋಪಿಯು ಯಾರೂ ಇಲ್ಲದ ವೇಳೆ ಒಬಾಲಕಿಯ ಮೇಲೆ ಅತ್ಯಾಚಾರವೆಸಗಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ.. ಆದ್ರೆ ಬಾಲಕಿ ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ.. ಬಳಿಕ ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ್ದು, ಆರೋಪಿಗೆ 3000 ದಂಡ ವಿಧಿಸುವ ಜೊತೆಗೆ , ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ಪರಿಹಾರ ಧನ ನೀಡುವಂತೆ ಆದೇಶಿಸಿದೆ.
ಮಹಿಳೆಯರ ಬಗ್ಗೆ ವಿಶ್ವಕ್ಕೆ ಗೊತ್ತಾಗುವಂತೆ ವಿವಾದಾತ್ಮಕ ಹೇಳಿಕೆ ನೀಡಿ , ಈಗ ಉಲ್ಟಾ ಹೊಡೆದ ಇಮ್ರಾನ್ ಖಾನ್..!