ಬಾಯ್ ಫ್ರೆಂಡ್ ನಂಬಿ ಹೋದ ಅಪ್ರಾಪ್ತೆ ಮೇಲೆ ಎರಗಿಬಿದ್ದ ರಾಕ್ಷಸರು – ಪ್ರಿಯಕರ ಸೇರಿ 8 ಮಂದಿಯಿಂದ ಗ್ಯಾಂಗ್ ರೇಪ್..!
ಪಂಜಾಬ್ : ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಪ್ರಿಯಕರ ಸೇರಿದಂತೆ ಒಟ್ಟು 8 ಜನ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಪೋಷಕರ ದೂರನ್ನ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬಡ ಕುಟುಂಬದ ಹುಡುಗಿಯಾಗಿದ್ದ ಸಂತ್ರಸ್ತೆಯ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ಸಂದೀಪ್ ಎಂಬ ಪ್ರಕರಣ ಪ್ರಮುಖ ಆರೋಪಿಯು ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆದ್ರೆ ಬಾಲಕಿಯ ಪ್ರೀತಿ ವಿಚಾರ ಮನೆಯಲ್ಲಿ ತಿಳಿದಿತ್ತಾ ಇಲ್ಲವಾ ಎಂಬುದು ತನಿಖೆಯ ನಂತರ ಬಯಲಾಗಬೇಕಿದೆ.
ಪ್ರಕರಣದ ಹಿನ್ನೆಲೆ
ಮಾರ್ಚ್ 15 ರಂದು ಸಂದೀಪ್ ಬಾಲಕಿಗೆ ಕರೆ ಮಾಡಿ ಮಾರನೇ ದಿನ ಮಂಡಿ ದಾಬ್ವಾಲಿ ಬಸ್ ಸ್ಟಾಂಡ್ ನಲ್ಲಿ ಮೀಟ್ ಮಾಡುವಂತೆ ತಿಳಿದ್ದನಂತೆ. ಅಲ್ಲದೇ ಅಂದೇ ಮದುವೆಯಾಗುವುದಾಗಿಯೂ ಹೇಳಿದ್ದಾನೆ. ಇದನ್ನ ನಂಬಿ ಹೋಗಿದ್ದ ಬಾಲಕಿಗೆ ದೊಡ್ಡ ಆಘಾತವೇ ಕಾದಿತ್ತು. ಮಾರ್ಚ್ 16 ಕ್ಕೆ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಬಾಲಕಿ ಪಂಜಾಬ್ ನ ಕಿಲಿನವಾಲಿ ಎಂಬಲ್ಲಿಗೆ ಹೋಗಿದ್ದಾಳೆ. ಅಲ್ಲಿ ಆಕೆಯನ್ನ ಸಂದೀಪ್ ಪಿಕ್ ಮಾಡಿ ಜಲಂಧರ್ ಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಒಂದು ರೂಂಗೆ ಕರೆದೊಯ್ದಿದ್ದಾನೆ.
ಅಲ್ಲಿ ಮೊದಲೇ ಸಂದೀಪ್ ನ 7 ಮಂದಿ ಸಹಚರರು ಬೀಡು ಬಿಟ್ಟಿದ್ದರು. ರಂಜೀತ್ ,ಲಂಬೂ , ಬಿಲ್ಲಾ, ರಾಹುಲ್, ಶೈನ್ಯಾ, ಸಂತೋಶ್, ಮತ್ತೊಬ್ಬ ಅಪರಿಚಿತ ವ್ಯಕ್ತಿಗಳು ಬಾಲಕಿಯ ಆಗಮನಕ್ಕೆ ಕಾದುಕುಳಿತ್ತಿದ್ದರು. ಬಳಿಕ ಎಲ್ಲರೂ ಬಾಲಕಿಯ ಮೇಲೆ ಮೃಗಗಳಂತೆ ಎರಗಿಬಿದ್ದಿದ್ದಾರೆ. ಒಬ್ಬರಾದ ನಂತರ ಒಬ್ಬರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಬಾಲಕಿಯನ್ನ ಮಾರ್ಚ್ 20 ರಂದು ಆಕೆಯ ಮನೆಯ ಹೊರಗೆ ಪ್ರಜ್ಞಾಹೀನ ಡಸ್ಥಿತಿಯಲ್ಲಿ ಬಿಸಾಡಿ ಹೋಗಿದ್ದಾರೆ. ಎಂದು ಕುಟುಂಬಸ್ಥರು ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಅರೆಸ್ಟ್ ಆಗಿದ್ದು, ತಲೆಮರೆಸಿಕೊಂಡಿರುವ ಐವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ ಜೀ ಆಟದಲ್ಲಿ ಸೋತ ವಿಚಾರಕ್ಕೆ ಗಲಾಟೆ ಬಾಲಕನನ್ನ ಕೊಲೆ ಮಾಡಿದ ಅಪ್ರಾಪ್ತ..!
16 ವರ್ಷದ ಬಾಲಕನಿಂದ ನಿರಂತರ ಲೈಂಗಿಕ ಕಿರುಕುಳ – ಬೆಂಕಿ ಹಚ್ಚಿಕೊಂಡಿದ್ದ 15 ವರ್ಷದ ಬಾಲಕಿ ಸಾವು..!
ಮಾನಸಿಕ ಅಸ್ವಸ್ಥೆ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದ ಕಾಮುಕನನ್ನ ಹಿಡಿದುಕೊಟ್ಟಿದ್ದು ಸಾಕು ನಾಯಿ..!