15 ವರ್ಷದ ಬಾಲಕಿ ಮೇಲೆ 9 ಕಾಮುಕರಿಂದ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ

1 min read

15 ವರ್ಷದ ಬಾಲಕಿ ಮೇಲೆ 9 ಕಾಮುಕರಿಂದ 8 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ

ರಾಜಸ್ಥಾನ: 15 ವರ್ಷದ ಬಾಲಕಿಯ ಮೇಲೆ 9 ಜನ ರಾಕ್ಷಸರು 8 ದಿನಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿರುವ ಹೀನ ಕೃತ್ಯ ನಿನ್ನೆ ವಿಶ್ವ ಮಹಿಳಾ ದಿನಾಚರಣೆಯಂದೇ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
9 ಕಾಮುಕರು ಬಾಲಕಿಯನ್ನ ಅಪಹರಿಸಿ 8 ದಿನಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ. ಇನ್ನೂ ಬಾಲಕಿ ಹೀಗೋ ಈ ಕಾಮುಕರಿಂದು ತಪ್ಪಿಸಿಕೊಂಡು ತನ್ನ ಮನೆಗೆ ತಲುಪಿದ್ದು, ಪೋಷಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ದೂರು ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

3 ಚಲಿಸುತ್ತಿದ್ದ ಕಾರುಗಳಲ್ಲಿ 12 ಜನರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ವಿಡಿಯೋ ವೈರಲ್..!

ಕಳೆದ ಫೆಬ್ರವರಿ 25 ರಂದು ಬಾಲಕಿಯ ಸ್ನೇಹಿತ ಬುಲ್ಬುಲ್ ಮತ್ತು ಇನ್ನೊಬ್ಬ ಯುವಕ ಚೋಥ್ಮಲ್ ಎಂಬಾತರು ಬಾಲಕಿಗೆ ಶಾಲಾ ಬ್ಯಾಗ್ ಅನ್ನು ಖರೀದಿಸುವ ನೆಪದಲ್ಲಿ ಝಾಲಾವರ್ ನಗರಕ್ಕೆ ಕರೆದೊಯ್ದಿದ್ದಾರೆ.
ಬಳಿಕ ರಸ್ತೆ ಮಧ್ಯದಲ್ಲಿ ಇನ್ನೂ ಮೂವರು ಇವರ ಜೊತೆ ಸೇರಿಕೊಂಡಿದ್ದಾರೆ. ಬಳಿಕ ಬಾಲಕಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದಾರೆ. 8 ದಿನಗಳ ಕಾಲ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ಒಟ್ಟು 9 ಮಂದಿ ಸೇರಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಯನ್ನ ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಗ್ರಾಮಸ್ಥರು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd