3 ಚಲಿಸುತ್ತಿದ್ದ ಕಾರುಗಳಲ್ಲಿ 12 ಜನರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ವಿಡಿಯೋ ವೈರಲ್..!
ಚಲಿಸುತ್ತಿದ್ದ ಮೂರು ಕಾರುಗಳಲ್ಲಿ ಒಟ್ಟು 12 ಮಂದಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹೌದು ರಾಜಸ್ಥಾನದಲ್ಲಿ ಇಂತಹದೊಂದು ಹೇಯ ಕೃತ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಯುವತಿಯನ್ನ ಗುರುತಿಸಿ ಆಕೆಯಿಂದ ಮಾಹಿತಿ ಪಡೆದಿರುವ ಜೈಪುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 6 ತಿಂಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂರು ಕಾರುಗಳಲ್ಲಿ ಒಟ್ಟು 12 ಮಂದಿ ಅತ್ಯಾಚಾರವೆಸಗಿದ್ದು, ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕಾಂಪೌಂಡ್ ನಲ್ಲೇ ಮಹಿಳೆಯ ಮೇಲೆ 3 ದಿನ ನಿರಂತರ ಅತ್ಯಾಚಾರವೆಸಗಿದ ಅಧಿಕಾರಿ..!
ಉತ್ತರಪ್ರದೇಶ ಮೂಲದ ಯುವತಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಜಸ್ಥಾನಕ್ಕೆ ಬಂದು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಸ್ನೇಹಿತನೊಬ್ಬ ಯುವತಿಯನ್ನ ತನ್ನನ್ನ ಮೀಟ್ ಮಾಡುವಂತೆ ಹೇಳಿದ್ದಾನೆ. ಸ್ನೇಹಿತ ಹೇಳಿದ ಸ್ಥಳಕ್ಕೆ ಹೋದಾಗ ಆಕೆಯನ್ನು ಕಾರ್ ನಲ್ಲಿ ಎಳೆದುಕೊಂಡು ಹೋದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಾರ್ ಗಳನ್ನು ಬದಲಾಯಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇತ್ತೀಚೆಗೆ ಈ ಘಟನೆ ವಿಡಿಯೋ ವೈರಲ್ ಆಗಿದೆ. ಮೂವರನ್ನ ಬಂಧಿಸಲಾಗಿದ್ದು, ಉಳಿದವರ ಸೆರೆಗೆ ಬಲೆ ಬೀಸಿದ್ದಾರೆ ಜೈಪುರ ಪೊಲೀಸರು.
ಇನ್ನೂ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮೊದಲಿಗೆ ಯುವತಿಯ ಅತ್ಯಾಚಾರದ ವಿಡಿಯೋ ಉತ್ತರಪ್ರದೇಶದಲ್ಲಿ ವೈರಲ್ ಆಗಿತ್ತು. ಬಳಿಕ ತನಿಖೆ ಆರಂಭಿಸಿದಾಗ ಘಟನೆ ನಡೆದಿದ್ದು ರಾಜಸ್ಥಾನದಲ್ಲಿ ಎಂಬುದು ಬೆಳಕಿಗೆ ಬಂದಿದೆ. ಇದಾದ ನಂತರ ಎರೆಡೂ ರಾಜ್ಯಗಳ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬಳಿಕ ಜೈಪುರದ ಮಾನ್ ಸರೋವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಶೇಷ ಟೀಂ ರಚಿಸಿ ತನಿಖೆ ಆರಂಭಿಸಿದ್ದಾರೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಯನ್ನ ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಗ್ರಾಮಸ್ಥರು..!
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸಂತ್ರಸ್ತ ಯುವತಿಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬನ ಪರಿಚಯವಾಗಿದೆ. ಬಳಿಕ ಇಬ್ಬರೂ ಸ್ನೇಹಿತರಾಗಿದ್ದಾರೆ. ಇದೇ ಸಲಿಗಹೆಯಲ್ಲೇ ಯುವಕ ಆಕೆಯನ್ನ ಜೈಪುರಕ್ಕೆ ಕರೆಸಿಕೊಂಡಿದ್ದಾನೆ. ಆಕೆಯೂ ಕೂಡ ಜೈಪುರಕ್ಕೆ ಬಂದು ಒಂದು ಹೋಟೆಲ್ ನಲ್ಲಿ ಉಳಿಡುಕೊಂಡಿದ್ದಳು. ಈ ವೇಳೆ ಆಕೆಯನ್ನ ಪಿಕ್ ಮಾಡಲು ಅಲ್ಲಿ ಕಾರೊಂದರಲ್ಲಿ ಓರ್ವ ಅಜಮೇರ್ ರಸ್ತೆಗೆ ಬಂದಿದ್ದ ಅಲ್ಲಿಗೆ ಹೋದ ಯುವತಿಗೆ ಕಾರಿನಲ್ಲಿ ಇತರರು ಇರುವುದು ಗೊತ್ತಾಗಿದೆ. ತಕ್ಷಣವೇ ಆಕೆಯನ್ನ ಎಳೆದು ಕಾರಿನೊಳಗೆ ಎಳೆದು ಕೂರಿಸಿಕೊಂಡು ಬಳಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತ್ಯಾಚಾರದ ವಿಡಿಯೋವನ್ನ ಸಹ ಸೆರೆ ಹಿಡಿಯಲಾಗಿತ್ತು. ಆದ್ರೆ ಯುವತಿ ಈ ಬಗ್ಗೆ ದೂರು ದಾಖಲು ಮಾಡಿರಲಿಲ್ಲ. ಇತ್ತೀಚೆಗೆ ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಸಂಪರ್ಕಿಸಿದ ನಂತರ ಈ ಬಗ್ಗೆ ಯುವತಿ ಬಾಯ್ಬಿಟ್ಟಿದ್ದಾಳೆ.