ಪೊಲೀಸ್ ಕಾಂಪೌಂಡ್ ನಲ್ಲೇ ಮಹಿಳೆಯ ಮೇಲೆ 3 ದಿನ ನಿರಂತರ ಅತ್ಯಾಚಾರವೆಸಗಿದ ಅಧಿಕಾರಿ..!

1 min read

ಪೊಲೀಸ್ ಕಾಂಪೌಂಡ್ ನಲ್ಲೇ ಮಹಿಳೆಯ ಮೇಲೆ 3 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಅಧಿಕಾರಿ..!

ರಕ್ಷಕರಾಗಬೇಕಾಗಿರುವವರೇ ಭಕ್ಷಕರಾದಾಗ ಜನರು ಯಾರನ್ನ ನಂಬಬೇಕು ಯಾರ ಬಳಿ ನ್ಯಾಯ ಕೇಳಬೇಕು ಎನ್ನುವ ಪ್ರಶ್ನೆ ಕಾಡುತ್ತೆ. ಪೊಲೀಸರು ಅಪರಾಧಗಳು ನಡೆದಾಗ ಸಂಸ್ತ್ರಿರಿಗೆ ನ್ಯಾಯ ಕೊಡಿಸಿ ಅವರ ಪರ ನಿಲ್ಲುತ್ತಾರೆ. ಆದ್ರೆ ಇಂತಹವರ ನಡುವೆ ಕೆಲವರ ತಮ್ಮ ವರದಿಗೆ ಅವಮಾನವಾಗುವಂತಹ ಕೆಲಸಗಳನ್ನ ಮಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಹ ಘಟನೆ ಇದೀಗ ರಾಜಸ್ಥಾನದ ಆಲ್ವಾರ್ ನಲ್ಲಿ ನಡೆದಿದೆ. ಹೌದು 26 ವರ್ಷದ ಮಹಿಳೆಯೊಬ್ಬರು ತನ್ನ ಗಂಡನ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದ ವೇಳೆ ಅಧಿಕಾರಿಯೇ ಅತ್ಯಾಚಾರವೆಸಗಿರೋದಾಗಿ ಮಹಿಳೆ ಆರೋಪ ಮಾಡಿದ್ದಾರೆ.

6 ವರ್ಷದ ಬಾಲಕಿಯ ಮೃತದೇಹ ಅರೆನಗ್ನಾ ಸ್ಥಿತಿಯಲ್ಲಿ ಪತ್ತೆ : ಅತ್ಯಾಚಾರದ ಶಂಕೆ

ಪೊಲೀಸ್ ಠಾಣೆಯ ಕಾಂಪೌಂಡ್ನೊಳಗೇ, ಸಬ್ ಇನ್ಸ್ಪೆಕ್ಟರ್ ವಾಸಿಸುತ್ತಿದ್ದ ಕೊಠಡಿಯಲ್ಲಿ, ಮೂರು ದಿನಗಳ ಕಾಲ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ತಿಳಿದ ತಕ್ಷಣ ಭಾನುವಾರ ಅತ್ಯಾಚಾರದ ಕೇಸು ದಾಖಲಿಸಿದ್ದು, ಮ್ಯಾಜಿಸ್ಟ್ರೇಟರ ಮುಂದೆ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯಾದ (50) ಪೆಕ್ಟರ್ ಸಿಂಗ್ ಎಂಬುವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮಹಿಳೆ ಮಾರ್ಚ್ 2 ರಂದು ತನ್ನ ಗಂಡ ತನ್ನ ವಿರೋಧವಿದ್ದರೂ ತನಗೆ ವಿಚ್ಛೇದನ ಕೊಡಬೇಕೆಂದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಳು. ಆ ಸಂದರ್ಭದಲ್ಲಿ ಠಾಣೆಯಲ್ಲಿ ಸೆಕೆಂಡ್ ಇನ್ ಕಮಾಂಡ್ ಆಗಿದ್ದ ಸಬ್ಇನ್ಸ್ಪೆಕ್ಟರ್ ಸಿಂಗ್ ಎಂಬುವನು ಆಕೆಯ ಮೇಲೆ ಅತ್ಯಾಚಾರ ಎಸಗಿದ. ಮಾರ್ಚ್ 5 ರವರೆಗೆ ಪೊಲೀಸ್ ಠಾಣೆಯ ಕಾಂಪೌಂಡಿನಲ್ಲಿ ತಾನು ವಾಸಿಸುತ್ತಿದ್ದ ಕೊಠಡಿಯಲ್ಲಿ ಕೂಡಿಹಾಕಿ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ನಡೆಸಿದ ಎನ್ನಲಾಗಿದೆ. ಅತ್ಯಾಚಾರದ ಆರೋಪವನ್ನು ಸಮರ್ಥಿಸುವ ಮೊಬೈಲ್ ರೆಕಾರ್ಡಿಂಗ್ ಅನ್ನು ಕೂಡ ಮಹಿಳೆ ಒದಗಿಸಿದ್ದಾಳೆ. ಆರೋಪಿಯನ್ನು ಶೀಘ್ರದಲ್ಲೇ ಅಮಾನತುಗೊಳಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಠಾಣಾಧಿಕಾರಿಯ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಳ್ವಾರ್ ಎಸ್ಪಿ ಹೇಳಿದ್ದಾರೆ.

ತಂದೆ – ತಾತನನ್ನು ಬರ್ಬರವಾಗಿ ಕೊಲೆ ಮಾಡಿದ ತಾನೂ ಆತ್ಮಹತ್ಯೆ ಮಾಡಿಕೊಂಡ..!

ಅಂದ್ಹಾಗೆ ಮಹಿಳೆ 2018ರಲ್ಲೂ ಸಹ ತನ್ನ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿದ್ದಳು ಎನ್ನಲಾಗೊದೆ. ಆಗ ಈ ವಿಚಾರ ಬಗೆಹರಿದಿತ್ತು. ಆದ್ರೆ ಈಗ ಆತ ಈಕೆಗೆ ಇಷ್ಟವಿಲ್ಲದೇ ಇದ್ರೂ ಬಲವಂತವಾಗಿ ಡೈವೋರ್ಸ್ ಕೊಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಪತಿ ವಿರುದ್ಧ ದೂರು ಸಲ್ಲಿಕೆ ಮಾಡಲು ಬಂದಾಗ ಅತ್ಯಾಚಾರಕ್ಕೆ ಒಳಗಾಗಿರೋದಾಗಿ ಮಹಿಳೆಯು ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd